ಜಿಲ್ಲೆ

ನಿವೃತ್ತ ಶಿಕ್ಷಕಿಗೆ ಹುಲ್ಲೇಪುರ ಗ್ರಾಮಸ್ಥರಿಂದ ಬೀಳ್ಕೊಡುಗೆ

ಯಳಂದೂರು : ಚಾಮರಾಜನಗರ ತಾಲೂಕಿನ ಹುಲ್ಲೇಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಜಿ.ಭಾಗ್ಯವತಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಿದರು.

ಹುಲ್ಲೇಪುರ ಗ್ರಾಮಸ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಅದ್ದೂರಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಜಿ.ಭಾಗ್ಯವತಿ ಅವರನ್ನು ಅಭಿನಂದಿಸಲಾಯಿತು. ಬಿಆರ್‌ಪಿ ಸವಿತಾ ಮಾತನಾಡಿ, ಗ್ರಾಮದಲ್ಲಿ ಮಕ್ಕಳಿಗೆ ಪಾಠ ಮಾಡುವುದರ ಜತೆಗೆ ಎಲ್ಲರ ಜತೆಗೆ ಸ್ನೇಹದಿಂದ ಶೈಕ್ಷಣಿಕೆ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುತ್ತಿದ್ದರು. ಭಾಗ್ಯವತಿ ಅವರು ಮಕ್ಕಳಿಗೆ ಮನಮುಟ್ಟುವಂತೆ ಬೋಧಿಸುತ್ತಾ ಅಚ್ಚುಮೆಚ್ಚು ಮಾತಿನಿಂದಲೇ ವಿದ್ಯಾರ್ಥಿಗಳು, ಪಾಲಕರ ಮನ ಗೆಲ್ಲುತ್ತಿದ್ದರು. ಇವರಿಂದ ಕಲಿತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಪ್ರೇರಣೆಯಾಗಿದ್ದಾರೆ. ಜನರಿಂದಲೇ ಹೃದಯಸ್ಪರ್ಶಿ ಬೀಳ್ಕೂಡುಗೆ ಪಡೆದುಕೊಳ್ಳುತ್ತಿರುವುದು ಇವರ ಜನಪ್ರಿಯತೆಗೆ ಸಾಕ್ಷಿ ಎಂದರು.

ಎಸ್.ಜಿ.ಭಾಗ್ಯವತಿ ಮಾತನಾಡಿ, ಗ್ರಾಮದವರು ನನ್ನ ಮೇಲಿಟ್ಟಿರುವ ಅಪಾರ ಪ್ರೀತಿಗೆ ಚಿರಋಣಿಯಾಗಿದ್ದೇನೆ. ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ವಿದ್ಯಾರ್ಥಿಗಳು, ಪಾಲಕರು, ಸಹಶಿಕ್ಷಕರು ನನ್ನ ಕರ್ತವ್ಯಕ್ಕೆ ಬೆಂಬಲವಾಗಿ ನಿಂತಿದ್ದರು. ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಡಿ ಎಂದು ಪಾಲಕರಿಗೆ ಮನವಿ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು, ಗ್ರಾ.ಪಂ. ಸದಸ್ಯರಾದ ಮಂಜು, ಶಶಿಧರ್, ಯಜಮಾನರಾದ ಸಿದ್ದರಾಜು, ಮಾದೇಶ್, ಮಹೇಶ್, ಕುಮಾರಸ್ವಾಮಿ, ಗೋವಿಂದಶೆಟ್ಟಿ, ಮಹದೇವಶೆಟ್ಟಿ, ಮಂಗಳಮ್ಮ, ಗ್ರಾ.ಪಂ. ಪಿಡಿಒ ಆದಿಶೇಷ, ಬಿಲ್‌ಕಲೆಕ್ಟರ್ ಕೃಷ್ಣ, ಬಿಆರ್‌ಪಿ ಮಹದೇವಪ್ಪ, ಸಿಆರ್‌ಪಿ ಶಿವಮೂರ್ತಿ, ರೇಚಣ್ಣ, ಪ್ರೌಢಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರಾಮಸ್ವಾಮಿ, ಮಹದೇವಸ್ವಾಮಿ, ಭರತ್‌ಭೂಷಣ್, ಕೃಷ್ಣಮೂರ್ತಿ, ಸುಧಾ, ನಿರ್ಮಲ, ಸಿದ್ದಲಿಂಗಮೂರ್ತಿ, ಚಿನ್ನಸ್ವಾಮಿ, ಶಾಂತರಾಜು ಇತರರು ಇದ್ದರು.