ಸೇವೆಯಿಂದ ನಿವೃತ್ತಿ ಹೊಂದಿದ ತಾಕೇರಿ ಗ್ರಾಮದ ಎಸ್.ಡಿ.ತೇಜ ಅವರನ್ನು ಕಿರಗಂದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು. ತಾರಾ, ಮುತ್ತಣ್ಣ, ರಘು, ಪೊನ್ನಪ್ಪ ಇತರರಿದ್ದರು. 
ಜಿಲ್ಲೆ

ನಿವೃತ್ತ ಯೋಧನಿಗೆ ಆತ್ಮೀಯ ಸನ್ಮಾನ

ಸೋಮವಾರಪೇಟೆಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಕೇರಿ ಗ್ರಾಮದ ಎಸ್.ಡಿ.ತೇಜ ಅವರನ್ನು ಕಿರಗಂದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ  ಆತ್ಮೀಯವಾಗಿ ಸನ್ಮಾನಿಸಲಾಯಿತು.

ತಾಕೇರಿ ಗ್ರಾಮದ ಎಸ್.ಎಸ್.ದೇವಯ್ಯ, ರಾಜಮ್ಮ ದಂಪತಿ ಪುತ್ರ ತೇಜ ಅವರು 2006ರಲ್ಲಿ ಭಾರತೀಯ ಸೇನೆಗೆ ಸೇರಿ ಮಹಾರಾಷ್ಟ್ರ, ಹರಿಯಾಣ, ಜಮ್ಮು ಕಾಶ್ಮೀರ, ಸಿಕಂದರಬಾದ್, ರಾಜಸ್ಥಾನ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದ ಗ್ರಾಮಸ್ಥರು, ಕಿರಗಂದೂರು ಗ್ರಾಪಂ ಅಧ್ಯಕ್ಷೆ ತಾರಾಸುಧೀರ್, ಮಾಜಿ ಅಧ್ಯಕ್ಷ ಎಸ್.ಕೆ.ರಘು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ತಾಲ್ಲೂಕು ಪಂಚಾಯಿತಿ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪಿ.ಮುತ್ತಣ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಕಿರಗಂದೂರು ಗ್ರಾಪಂ ಸದಸ್ಯರಾದ ಎಂ.ಪಿ.ತಿಮ್ಮಯ್ಯ, ಶುಭರಾಣಿ, ಶ್ಯಾಮಲ ಶಿವಕುಮಾರ್, ಮಾಜಿ ಸೈನಿಕ ರಾಜು, ತಾಕೇರಿ ಚಂಗಪ್ಪ ಮತ್ತಿತರರು ಇದ್ದರು.