ಸಿದ್ದಾಪುರ: ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಇತ್ತೀಚೆಗೆ ತವರಿಗೆ ಆಗಮಿಸಿದ ತಾಲೂಕಿನ ಕ್ಯಾದಗಿ ಸಮೀಪದ ಹೆಗ್ಗೇರಿಯ ವೀರಯೋಧ ಸದಾನಂದ ಎಚ್. ನಾಯ್ಕ ಅವರನ್ನು ಸ್ಥಳೀಯ ಗ್ರಾಪಂ, ಊರಿನ ಯುವಕ- ಯುವತಿಯರು ಹಾಗೂ ಸಾರ್ವಜನಿಕರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಮೊದಲು ಕ್ಯಾದಗಿ ಗ್ರಾಪಂ ಸಭಾಭವನದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್. ನಾಯ್ಕ, ಮಾಜಿ ಸದಸ್ಯ ಕೆ.ಟಿ. ನಾಯ್ಕ, ಪಿಡಿಒ ಭೀಮಾ ನಾಯ್ಕ ಎಂ.ಬಿ. ಹಾಗೂ ಇತರರು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಕ್ಯಾದಗಿಯಿಂದ ಹೆಗ್ಗೇರಿವರೆಗೆ ಮೆರವಣಿಗೆ ಮೂಲಕ ಊರಿನ ಯುವಕ- ಯುವತಿಯರು, ಗ್ರಾಮಸ್ಥರು ಕರೆತಂದರು.