ಬಾಗಲಕೋಟೆ ನಗರದ ನೂತನ ಜಿ.ಪಂ. ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.  
ಜಿಲ್ಲೆ

ನಿರ್ಲಕ್ಷ್ಯ ಮಾಡಿದರೇ ಸಹಿಸಲು ಸಾಧ್ಯವಿಲ್ಲ

ಬಾಗಲಕೋಟೆ: ಸರ್ಕಾರ ಉದ್ದೇಶಿಸಿರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಯಾವುದೇ ಅಡೆತಡೆ ಇಲ್ಲದೆ ನಿರೀಕ್ಷೆಗೆ ತಕ್ಕಂತೆ ಮಾಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಸಂಪೂರ್ಣ ಬೆಂಬಲವಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಿರ್ಲಕ್ಷ್ಯ ಮಾಡಿದರೇ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದ ನೂತನ ಜಿ.ಪಂ. ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಿ ಜನಪ್ರತಿನಿಽಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಬೇಕು. ಕೆಲಸ ಮಾಡದೇ ಜವಾಬ್ದಾರಿ ಮರೆತು ಹಾರಿಕೆ ಉತ್ತರ ನೀಡುವುದು ಇನ್ನು ಮುಂದೆ ನಡೆಯುವದಿಲ್ಲ. ಪ್ರತಿ ಸಭೆಗೆ ಈ ಹಿಂದೆ ನಡೆದ ಸಭೆಯಲ್ಲಿ ಹೇಳಿದ ಸಮಸ್ಯೆಗಳಿಗೆ ಉತ್ತರ ನೀಡಬೇಕು. ಕೆಲಸದಲ್ಲಿ ಅಲಕ್ಷ ತೋರಿದರೆ ಸಹಿಸುವದಿಲ್ಲ. ನಿರೀಕ್ಷಿತ ಮಟ್ಟಕ್ಕಿಂತ ಕೆಲಸ ಮಾಡುವವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಶಾಲೆಗಳಿಗೆ ಶಿಕ್ಷಕರ ಕೊರತೆ, ಕುಡಿಯುವ ನೀರು, ಪುನರವಸತಿ ಕೇಂದ್ರಗಳ ಅಭಿವೃದ್ಧಿ, ಸಂತ್ರಸ್ತರ ಪರಿಹಾರ ಮತ್ತು ಸಮಸ್ಯೆಗಳ ಅವಲೋಕನ ಕುರಿತು ಸುದೀರ್ಘ ಚರ್ಚೆ ನಡೆಸಿ ಪ್ರಥಮ ಸಭೆಯಲ್ಲಿಯೇ ಅಽಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.


ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಸಾರ್ವಜ ನಿಕರಿಂದ ದೂರುಗಳು ಬಂದಿವೆ. ಆಯಾ ಕ್ಷೇತ್ರದ ಶಾಸಕರು ಗಮನಕ್ಕೆ ತಂದರು ಯಾವುದೇ ಕ್ರಮ ಆಗಿಲ್ಲ. ಕೇವಲ ಸಬೂಬ, ಕುಂಟುನೆಪ ಹೇಳಿ ದರೆ ಸಾಲದು ವಾಸ್ತವದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಿಲ್ಲಿ ಗಮನ ಹರಿಸಬೇಕು. ಪ್ರಮುಖ ವಿಚಾರಗಳು ಇದ್ದರೆ ತಕ್ಷಣಕ್ಕೆ ನನ್ನ ಗಮನಕ್ಕೆ ತಂದಲ್ಲಿ ಸರ್ಕಾರದಿಂದ ಅನುದಾನ. ಸಂಬಂಧಪಟ್ಟ ಸಚಿವರಿಂದ ನಿರ್ದೇಶನ ನೀಡಲಾಗುವುದು. ಶಾಸಕರು ನಡೆಸುವ ಸಭೆಗಳಿಗೆ ಆಯಾ ಇಲಾಖೆಯ ಅಕಾರಿಗಳು ಕಡ್ಡಾಯವಾಗಿ ಹಾಜರ್ ಆಗಬೇಕು. ತಮ್ಮ ವರ್ತನೆ ಸುಧಾರಿಸಿಕೊಳ್ಳಬೇಕು ಇಂದಿನ ಸಭೆಗೆ ಬಾರದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ..
ಸಭೆಯಲ್ಲಿ ಕುಡಿಯುವ ನೀರಿನ ವಿಷಯದಲ್ಲಿರುವ ಲೋಪದೋಷಗಳ ಕುರಿತು ಶಾಸಕರು ಧ್ವನಿ ಎತ್ತಿದರು. ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ನನ್ನ ಮತಕ್ಷೇತ್ರದ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ದೊರೆಯುತ್ತಿಲ್ಲ. ಗಲಗಲಿ ಬ್ಯಾರೇಜ್‌ನಲ್ಲಿ ನೀರಿನಮಟ್ಟ ಕ್ಷಿಣಿಸಿದೆ. ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ೬ ಟಿಎಂಸಿ ನೀರು ಹರಿಬಿಟ್ಟಾಗ ನಮ್ಮ ತಾಲೂಕಿಗೆ ಬಂದು ತಲುಪುತ್ತದೆ. ಬೀಳಗಿ ಪಟ್ಟಣಕ್ಕೆ ಸರಬರಾಜುವಷ್ಟು ನೀರು ಸಮರ್ಪಕವಾಗಿದೆ. ಆದರು ೮ ದಿನಕ್ಕೆ ಒಂದು ಸಾರಿ ಪಟ್ಟಣಕ್ಕೆ ನೀರು ಬಿಡಲಾಗುತ್ತದೆ. ಈಚೆಗೆ ನಡೆದ ಸಭೆಯಲ್ಲಿ ಹೊಸ ಮೋಟಾರ ಖರೀದಿಗೆ ಸೂಚಿಸಲಾಗಿತ್ತು. ಜಿಲ್ಲಾಧಿಕಾರಿ ಅನುಮತಿಗೆ ತಿಳಿಸಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಧ್ವನಿಗೂಡಿಸಿ ನಮ್ಮ ಮತಕ್ಷೇತ್ರದಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ೪ ವರ್ಷದಿಂದ ಹೊಸ ಯಂತ್ರ ಕುಡಿಸಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಕೂಡಾ ಬಂದಾಗಿವೆ. ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂದು ದೂರಿದರು.

ಸಮಸ್ಯೆ ಆಲಿಸಿದ ಸಚಿವ ಆರ್.ಬಿ.ತಿಮ್ಮಾಪುರ, ಕುಡಿಯುವ ನೀರು ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದರೇ ಹೇಗೆ? ಅನುದಾನ ಇದ್ದರೇ ತಕ್ಷಣಕ್ಕೆ ಹೊಸ ನೀರಿನ ಎತ್ತುವ ಪಂಪ್ ಖರೀದಿ ಮಾಡಬೇಕು. ಅಗತ್ಯ ಬಿದ್ದರೇ ಜಿಲ್ಲಾಽಕಾರಿ ಪರವಾಣಿಗೆ ಪಡೆದುಕೊಳ್ಳಬೇಕು. ಗುಳೇದಗುಡ್ಡ, ಬೀಳಗಿ, ಇಳಕಲ್ಲ, ಹುನಗುಂದ, ಬಾಗಲಕೋಟೆ ಯಾವುದೇ ಇರಲಿ ಕ್ಷೇತ್ರದ ಶಾಸರು ಗಮನಕ್ಕೆ ತಂದಾಗ ಸ್ಪಂಧಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಾಡಿಕೆಯಂತೆ ಜೂನ್ ಮಳೆ ಪ್ರಾರಂಭವಾಗಬೇಕಾಗಿದ್ದು, ಆದರೆ ಇನ್ನು ಮಳೆ ಬಾರದೆ ಇದ್ದುದರಿಂದ ಕುಡಿಯುವ ನೀರು ಸೇರಿದಂತೆ ಜೃಷಿ ಕಾರ್ಯಕ್ಕೂ ಹಿನ್ನಡೆಯಾಗಲಿದೆ. ಇದೇ ರೀತಿ ೮-೧೦ ದಿನಗಳ ವರೆಗೆ ಮುಂದುವರೆದರೇ ಕುಡಿಯುವ ನೀರಿಗೂ ಸಹ ಸಮಸ್ಯೆಯಾಗಬಹುದು. ಇದನ್ನು ಗಮನಿಸಿದ ಸಚಿವರು ಕುಡಿಯುವ ನೀರಿನ ಸಮಸ್ಯೆಯಾಗದಂತೆ ರ‍್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಜಯಪ್ರಕಾಶ ಹಕ್ಕರಕಿ, ಜಿ.ಪಂ ಸಿಇಒ ಟಿ.ಭೂಬಾಲನ್, ಯುಕೆಪಿ ಮಹಾವ್ಯವಸ್ಥಾಪಕ ಭಂವರಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಅಪರ ಪೊಲೀಸ್ ವರಿಷ್ಠಾಕಾರಿ ಪ್ರಸನ್ನ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.