ಬಾಬುರಾವ ಯಡ್ರಾಮಿ ಕಲಬುರಗಿ
ಕರೊನಾ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಜಿಲ್ಲೆಗೆ ಮರಳಿರುವ ಕಾರ್ಮಿಕರು ಇತರರನ್ನು ತಂಗಲು ವ್ಯವಸ್ಥೆ ಕಲ್ಪಿಸಿರುವ ಕ್ವಾರಂಟೈನ್ ಸೆಂಟರ್ಗಳು ಅಗತ್ಯ ಸವಲತ್ತುಗಳಿಲ್ಲದೆ ನಿರ್ಲಕ್ಷೃ ಕೇಂದ್ರ'ಗಳಾಗಿ ಮಾರ್ಪಟ್ಟಿದ್ದು, ಅಲ್ಲಿರುವ ವಲಸಿಗರ ಮಾನಸಿಕ ಹಿಂಸೆ ಮತ್ತು ಸಂಕಷ್ಟ ಯಾರಿಗೂ ಕೇಳಿಸದಂತಾಗಿದೆ. ಮಹಾರಾಷ್ಟ್ರ ಇತರ ಕಡೆಗೆ ಗುಳೆ ಹೋಗಿದ್ದ ಅವರನ್ನು ಕರೆತರುವಾಗ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೋರಿದ ಆಸಕ್ತಿ ಮತ್ತು ಕಾಳಜಿ ಈಗ ತೋರುತ್ತಿಲ್ಲ.ಆಗ ಮೈಲೇಜ್ ಪಡೆದುಕೊಳ್ಳಲು ಇನ್ನಿಲ್ಲದಂತೆ ರಾಜಕೀಯ ಹೇಳಿಕೆಗಳನ್ನು ನೀಡಿದವರು' ಈಗ ಅವರತ್ತ ಹಣಕಿ ಹಾಕಿಯೂ ನೋಡುತ್ತಿಲ್ಲ. ಹೆಚ್ಚೂ ಕಮ್ಮಿ ಈಗ ಎಂಎಲ್ಸಿ ಮತ್ತು ರಾಜ್ಯಸಭೆ ರಾಜಕೀಯ ಚಟುವಟಿಕೆಗಳಲ್ಲಿ ಬಿಜಿಯಾಗಿದ್ದರಿಂದ ಕಾಮರ್ಿಕರ ಯೋಗಕ್ಷೇಮ ವಿಚಾರಿಸಲು ಪುರುಸೊತ್ತು ಇಲ್ಲವಾಗಿದೆ ಎಂಬ ಆಕ್ರೋಶದ ಮಾತು ಕೇಳಿಬರುತ್ತಿದೆ.
ಪ್ರತಿಯೊಂದು ಕ್ವಾರಂಟೈನ್ ಸೆಂಟರ್ನಲ್ಲಿ ಸಾಮಥ್ರ್ಯಕ್ಕಿಂತ ಒಂದಿಷ್ಟು ಜನರು ಹೆಚ್ಚಿದ್ದಾರೆ. 610 ಕ್ವಾರಂಟೈನ್ ಸೆಂಟರ್ಗಳಲ್ಲಿ ಕೆಲವನ್ನು ಬಿಟ್ಟರೆ ಉಳಿದೆಡೆ ಅಧ್ವಾನವೋ ಅಧ್ವಾನ. ಸರಿಯಾದ ಊಟ-ತಿಂಡಿ ಸರಬರಾಜು ಮಾಡುತ್ತಿಲ್ಲ, ಸ್ನಾನ ಮತ್ತು ಶೌಚಗೃಹಗಳಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡೇ ಮಲಗುವಂಥ ಸ್ಥಿತಿ ಕಾಣಲಾಗುತ್ತಿದೆ. ಹಲಕಟರ್ಿ ಮತ್ತು ಕೋಡ್ಲಿ, ಕೋರವಾರ ಕೇಂದ್ರದಲ್ಲಿರುವ ಕೆಲವರು ವಿಜಯವಾಣಿ ಜತೆ ಮಾತನಾಡಿ, ತಮ್ಮ ಸ್ಥಿತಿ ಬೇರೊಬ್ಬರಿಗೆ ಬರಬಾರದು ಎಂದು ಗೋಳಿಟ್ಟಿದ್ದಾರೆ.
ನಮ್ಮ ಕಡೆಗೆ ಯಾರೂ ತಿರುಗಿ ನೋಡುತ್ತಿಲ್ಲ. ಸುಮ್ಮನೆ ಬಿಟ್ಟಿದ್ದರೆ ಹೇಗೋ ನಮ್ಮ ಮನೆ ಕ್ವಾರಂಟೈನ್ನಲ್ಲಿ ಇರುತ್ತಿದ್ದೇವು. ಆದರೆ ಇಲ್ಲಿನ ಅವ್ಯವಸ್ಥೆ ಕೊಳೆಗೇರಿಯಂತಾಗಿದೆ. ಸ್ವಚ್ಛತೆ ಮಾಯವಾಗಿದೆ. ಎಲ್ಲೆಂದರಲ್ಲಿ ಗಲೀಜು, ಕಸಗೂಡಿಸುವವರು ಬರಲ್ಲ. ಊಟ ನೀಡುವವರು ಸಹ ಮುಖ ಕೆಡಿಸಿಕೊಂಡೇ ಬೇಕಾಬಿಟ್ಟಿ ಬಡಿಸುತ್ತಾರೆ. ಕೇವಲ ಅನ್ನ ಸಾಂಬಾರ ಕೊಡುತ್ತಾರೆ, ರೊಟ್ಟಿ ಚಪಾತಿ ಕೊಡಲ್ಲ. ಹಿಂಗಾದರೆ ಹೆಂಗ್ರಿ ಎಂದು ಪ್ರಶ್ನಿಸಿದರು.
ಲಾಕ್ಡೌನ್ ಒಂದಿಷ್ಟು ಸಡಿಲಿಕೆ ನಂತರ ಕಲಬುರಗಿ ಜಿಲ್ಲೆಗೆ ಮಹಾರಾಷ್ಟ್ರ, ಬೆಂಗಳೂರು, ತೆಲಂಗಾಣ, ದೆಹಲಿ ಇತರ ಕಡೆಗಳಿಂದ ಒಂದು ಲಕ್ಷಕ್ಕೂ ಅಧಿಕ ವಲಸಿಗರು ಬಂದಿದ್ದಾರೆ. ಅದರಲ್ಲಿ ಎರಡು ವಿಶೇಷ ಶ್ರಮಿಕ್ ರೈಲಿನ ಮೂಲಕ ಮುಂಬಯಿನಿಂದ 3000 ಗುಳೆ ಕಾಮರ್ಿಕರನ್ನು ಕರೆ ತರಲಾಗಿತ್ತು. ಅವರನ್ನು ಕಲಬುರಗಿ ನಗರ ಮತ್ತು ಚಿಂಚೋಳಿ, ಚಿತ್ತಾಪುರ, ಹಲಕಟರ್ಿ, ಕೋರವಾರ, ರಟಕಲ್, ಸೇಡಂ ಸೇರಿ 610 ಕ್ವಾರಂಟೈನ್ ಸೆಂಟರ್ಗಳಲ್ಲಿ 35 ಸಾವಿರಕ್ಕೂ ಹೆಚ್ಚಿನ ಕಾಮರ್ಿಕರನ್ನು ಇಡಲಾಗಿದೆ. ಆದರೆ ಇಲ್ಲಿರುವವರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ಅಧಿಕಾರಿಗಳು ಗಮನಹರಿಸಿದರೆ ಒಂದಿಷ್ಟು ಬವಣೆ ನೀಗಿಸಬಹುದು.
ಜಿಲ್ಲೆಯ ಕ್ವಾರಂಟೈನ್ ಸೆಂಟರಗಳಲ್ಲಿ ತಂಗಿರುವ ವಲಸೆ ಕಾರ್ಮಿಕರಿಗೆ ಸರಿಯಾದ ಊಟ ಇತರ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ. ಆಯಾ ತಾಲೂಕು ತಹಸೀಲ್ದಾರ್ ಮತ್ತು ತಾಪಂ ಇಒ ಮೇಲುಸ್ತುವಾರಿ ಮಾಡುತ್ತಿದ್ದಾರೆ. ಸಮಸ್ಯೆ ಕಂಡು ಬಂದಲ್ಲಿ ಪರಿಹರಿಸಲು ನಿದರ್ೇಶನ ನೀಡಲಾಗಿದೆ.
| ಶರತ್ ಬಿ. ಜಿಲ್ಲಾಧಿಕಾರಿ