ರಾಯಚೂರಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ಶುಕ್ರವಾರ ದಲಿತ ಮುಖಂಡರ ಸಭೆ ಜರುಗಿತು. ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ದಲಿತ ಮುಖಂಡರಾದ ರವೀಂದ್ರನಾಥ ಪಟ್ಟಿ, ಎಂ.ಈರಣ್ಣ, ವಿಶ್ವನಾಥ ಪಟ್ಟಿ, ಹೇಮರಾಜ ಅಸ್ಕಿಹಾಳ, ಎಸ್.ರಾಜು, ಶೇಖರ ರಾಂಪುರ, ಅನಿಲಕುಮಾರ, ರಾಘವೇಂದ್ರ ಬೋರಡ್ಡಿ, ಮಲ್ಲೇಶ ಕೊಲಮಿ ಇದ್ದರು. 
ಜಿಲ್ಲೆ

ನಿರ್ಲಕ್ಷ ತೋರಿದ ಅಕಾರಿಗಳಿಗೆ ನೋಟಿಸ್

ರಾಚಯ್ಯ ಸ್ವಾಮಿ

ರಾಯಚೂರು: ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಗಾಂೀಜಿ ಜತೆಗೆ ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜೆ ಮಾಡುವಂತೆ ಆದೇಶವಿದ್ದರೂ ಕೆಲ ಇಲಾಖೆಗಳ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದಿರುವ ಅಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ದಲಿತ ಸಂಘಟನೆ ಮುಖಂಡರೊಂದಿಗೆ ಶುಕ್ರವಾರ ಮಾತುಕತೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೇ ಅಪಮಾನ ಮಾಡಲಾಗಿದ್ದು, ನಗರಸಭೆ ಪೌರಾಯುಕ್ತರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ದಲಿತ ಸಂಘಟನೆಗಳು ಒತ್ತಾಯ ಮಾಡಿದ್ದವು.
ಈ ನಿಟ್ಟಿನಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ ದಲಿತ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಈ ಸಂದಭ್ದಲ್ಲಿ ಮುಖಂಡ ಎಂ.ಆರ್.ಭೇರಿ ಮಾತನಾಡಿ, ನಗರಸಭೆ ಕಚೇರಿಯಲ್ಲಿ ಶನಿವಾರ ನಮ್ಮ ಭೂಮಿ ಮತ್ತು ನಮ್ಮ ಮಣ್ಣು ಕಾರ್ಯಕ್ರಮ ನಡೆಯುತ್ತಿದ್ದು, ಅಂಬೇಡ್ಕರ್ ಭಾವಚಿತ್ರ ಇಟ್ಟು ಧ್ವಜಾರೋಹಣ ನಡೆಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ದಲಿತ ಮುಖಂಡರಾದ ರವೀಂದ್ರನಾಥ ಪಟ್ಟಿ, ಎಂ.ಈರಣ್ಣ, ವಿಶ್ವನಾಥ ಪಟ್ಟಿ, ಹೇಮರಾಜ ಅಸ್ಕಿಹಾಳ, ಎಸ್.ರಾಜು, ಶೇಖರ ರಾಂಪುರ, ಅನಿಲಕುಮಾರ, ರಾಘವೇಂದ್ರ ಬೋರಡ್ಡಿ, ಮಲ್ಲೇಶ ಕೊಲಮಿ, ಚನ್ನಬಸವ ಯಕ್ಲಾಸಪುರ ಉಪಸ್ಥಿತರಿದ್ದರು.