ಚಿತ್ರದುರ್ಗ:ನಗರದ ಬಸವೇಶ್ವರ ಆಸ್ಪತ್ರೆ ಹಾಗೂ ಜೆಎಂಐಟಿ ಹತ್ತಿರ ತುರ್ತಾಗಿ ಎರಡು ಫ್ಲೈ ಒವರ್‌ಗಳು ನಿರ್ಮಾಣವಾಗಬೇಕಿದೆ. ವೃದ್ಧರು, ಅಂಗವಿಕಲರು,ಮಹಿಳೆಯರು,ಮಕ್ಕಳು,ವಾಹನ ಇಲ್ಲದವರು,ನಗರದಲ್ಲಿ ಹಾದು ಹೋಗಿರುವ ರಾ.ಹೆ.48ರ ಈ ಸ್ಥಳಗಳಲ್ಲಿ ರಸ್ತೆ ದಾಟಲು ಸುತ್ತಿಬಳಸಿ ಬಸವೇಶ್ವರ ಆಸ್ಪತ್ರೆ,ಶಾಲೆ ಹಾಗೂ ಕೆಎಚ್‌ಬಿ ಕಾಲನಿ,ಹಾಸ್ಟೆಲ್ ಹೋಗಬೇಕಾಗಿದೆ. ಇದರಿಂದಾಗಿ ಪದೆ ಪದೇ ಅಪಾಯನ್ನು ಆಹ್ವಾನಿಸುವಂತಾಗಿದೆ.
ಜೆಎಂಟಿ ಬಳಿ ಕೂಡ ರಾ.ಹೆ.ಒಂದು ಬದಿಯಿಂದ ಮತ್ತೊಂದು ಬದಿಗೆ ಬರಬೇಕು ಎಂದಾದರೆ ಸಾಕಷ್ಟು ದೂರ ಕ್ರಮಿಸಬೇಕಿದೆ. ಆದ್ದರಿಂದ ಈ ಎರಡೂ ಸ್ಥಳಗಳಲ್ಲೂ ನಾಗರಿಕರು ಸುರಕ್ಷಿತವಾಗಿ ರಸ್ತೆ ದಾಟಲು ಫ್ಲೈ ಒವರ್ ನಿರ್ಮಾಣವಾಗ ಬೇಕಾಗಿದೆ. ಪಾದಾಚಾರಿಗಳಿಗಾಗಿ ಮೇಲು ಸೇತುವೆ ನಿರ್ಮಾಣ ಬೇಡಿಕೆಗೆ ಸರ್ಕಾರಗಳು ಸ್ಪಂದಿಸಬೇಕು.
ಆ ಮೂಲಕ ಅಪಘಾತಗಳನ್ನು ನಿಯಂತ್ರಿಸಬೇಕು ಎಂದಾದರೆ ಕೂಡಲೇ ಮೇಲು ಸೇತುವೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಮತ್ತು ರಾ.ಹೆ.ಪ್ರಾಧಿಕಾರ ಮುಂದಡಿ ಇಡಬೇಕಿದೆ. ಅಪಘಾತಗಳಾದಂಥ ಕೆಲ ದಿನಗಳವರೆಗೆ ರಸ್ತೆ ದಾಟಲು ಹಿಂದೇಟು ಹಾಕುವ ಜನರು ನಂತರದಲ್ಲಿ ಮತ್ತೆ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಕೋಟ್
ಆರ್ಥಿಕ ತಜ್ಞರ ಪ್ರಕಾರ ಪಾದಾಚಾರಿ ಮೇಲು ಸೇತುವೆಗಳ ನಿರ್ಮಾಣದಲ್ಲಿ ಹಣ ತೊಡಗಿಸುವುದು ಭವಿಷ್ಯದ ಹೂಡಿಕೆಯಾಗಿದೆ.ಆದ್ದರಿಂದ ಜಿಲ್ಲಾಡಳಿತ,ಸರ್ಕಾರಗಳು ತ್ತ ಕಡೆ ಗಮನ ಹರಿಸಿ,ಸಮಸ್ಯೆ ಬಗೆಹರಿಸ ಬೇಕು.
ಡಾ.ಎಚ್.ಎಸ್.ಕೆ.ಸ್ವಾಮಿ, ಜಿಲ್ಲಾಧ್ಯಕ್ಷ ಕರ್ನಾಟಕ ಸರ್ವೋದಯ ಮಂಡಳಿ,ಚಿತ್ರದುರ್ಗ.