ಜಿಲ್ಲೆ

ನಿರ್ದೇಶಕರಾಗಿ ಸಂದೀಪ್, ಲಕ್ಷ್ಮಮ್ಮ ಅವಿರೋಧ ಆಯ್ಕೆ

ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ ಸಂದೀಪ್, ಲಕ್ಷ್ಮಮ್ಮ ಅವಿರೋಧ ಆಯ್ಕೆಯಾದರು.

ನೂತನ ನಿರ್ದೇಶಕರಾದ ಸಂದೀಪ್ ಮತ್ತು ಲಕ್ಷ್ಮಮ್ಮ ಅವರನ್ನು ಬೂಕನಕೆರೆ ಗ್ರಾಮದಲ್ಲಿ ಅಭಿನಂದಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ಮಾತನಾಡಿ, ಉಳಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸವಿದೆ. ಸೊಸೈಟಿ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಕಷ್ಟಗಳಿಗೆ ಕಾಂಗ್ರೆಸ್ ಮುಖಂಡರು ಸ್ಪಂದಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಜನಸ್ನೇಹಿ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ. ಹಾಗಾಗಿ ನಮ್ಮ ಅಭ್ಯರ್ಥಿಗಳ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಬಿ.ಟಿ.ವೆಂಕಟೇಶ್, ಪುರಸಭೆ ಸದಸ್ಯ ಕೆ.ಬಿ.ಮಹೇಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಲ್ಲೇನಹಳ್ಳಿ ರಮೇಶ್, ಮಹೇಶ್, ಸ್ವಾಮಿಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಐಚನಹಳ್ಳಿ ಶಿವಣ್ಣ, ಉದ್ಯಮಿ ಬಿ.ಎಸ್.ರಾಮು, ದಯಾನಂದ್, ರವಿ ರಾಮೇಗೌಡ, ಕೆಡಿಪಿ ಸದಸ್ಯ ಮಲ್ಲಿಕಾರ್ಜುನ್, ಶ್ಯಾಮ್, ಅಜಯ್, ಬಸವರಾಜು, ಮಹೇಶ್ ಸ್ವಾಮಿಗೌಡ, ಹರೀಶ್, ಮೋಹನ್, ಬಿ.ಪಿ.ಯೋಗೇಶ್, ಮಧು, ಮಹಾದೇವ್, ಉಮೇಶ್, ಬಿ.ಆರ್.ಶೈಲಜಾ, ಬಿ.ಪಿ.ಜ್ಯೋತಿ ಉಪಸ್ಥಿತರಿದ್ದರು.