ಬಾಗಲಕೋಟೆ: ಆರ್‌ಸಟ್ ಸಂಸ್ಥೆ ೪೧.೦೦೦ ಸಾವಿರ ಜನರಿಗೆ ಸ್ವ ಉದ್ಯೋಗ ತರಬೇತಿ ನೀಡಿದ್ದು ಅದರಲ್ಲಿ ಶೇ.೭೫ ರಷ್ಟು ಜನರು ಸ್ವಂತ ಉದ್ಯೋಗ ಪ್ರಾರಂಭಿಸಿ ಬೇರೆಯವರಿಗೆ ಉದ್ಯೋಗ ನೀಡುವು ಜತೆಗೆ ತಮ್ಮ ಜೀವನದ ಜತೆಗೆ ಅನೇಕರ ಜೀವನ ನಡೆಸಲು ಸಹಕಾರಿಯಾಗಿದ್ದು, ನೀರುದ್ಯೋಗ ನಿವಾರಣೆಯಲ್ಲಿ ಆರ್‌ಸೆಟ್ ಸಂಸ್ಥೆಯ ಕಾರ್ಯ ಉತ್ತಮವಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಇಲ್ಲಿನ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಸಂಘದ ಕೊಟಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಕೇಂದ್ರ ಎಂಎಸ್‌ಎಂಇ ಮೂಲಕ ಯುವಕರಿಗೆ ಅವರ ಬಯಸುವ ಕ್ಷೇತ್ರದಲ್ಲಿ ತರಬೇತಿ ನೀಡಿ, ಅವರು ಸ್ವಂತ ಉದ್ಯಮ ಪ್ರಾರಂಭಿಸುವAತೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಯುವಕರು ಇದರ ಲಾಭ ಪಡೆದು ಉದ್ಯಮ ಪ್ರಾರಂಭಿಸಿ, ಬೇರೆಯವರಿಗೆ ಉದ್ಯೋಗ ನೀಡುವಂತಾಗಬೇಕು.ಆ ನಿಟ್ಟಿನಲ್ಲಿ ಆರ್‌ಸೆಟ್ ಅಂತಹ ಸಂಸ್ಥೆಗಳನ್ನು ಪ್ರಾರಂಭಿಸುವುದರಿಂದ ದೇಶದಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಹಾಗೂ ದೇಶದ ಆರ್ಥಿಕತೆ ಕೂಡ ಸುಧಾರಿಸುತ್ತದೆ. ಹೆಚ್ಚಿನ ಉದ್ಯಮ ಸ್ಥಾಪಿತವಾದ ದೇಶಗಳು ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದರು.
ಬೆಂಗಳೂರಿನ ಕೊಟಕ್ ಮಹೀಂದ್ರ ಬ್ಯಾಂಕ್‌ನ ಎಸ್.ಇ.ನಟರಾಜ್ ಮಾತನಾಡಿ, ಆರ್‌ಸೆಟ್ ಸಂಸ್ಥೆಯಲ್ಲಿ ಇಲ್ಲಿಯವರೆಗೆ ಅಂದಾಜು ೫೨ ಲಕ್ಷ ಜನರು ವಿವಿಧ ತರಬೇತಿಗಳನ್ನು ಪಡೆದಿದ್ದಾರೆ. ಅದರಲ್ಲಿ ಶೇ.೭೦ ರಷ್ಟು ಜನರು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಅದರಲ್ಲೂ ಹೆಚ್ಚಿನವರು ಮಹಿಳೆಯರು. ಹಿಂದಿನ ದಿನಗಳಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎನ್ನಲಾಗುತ್ತಿತ್ತು. ಆದರೆ, ಅದು ಈಗ ಬದಲಾಗಿ ಉದ್ಯೋಗಂ ಮನುಷ್ಯ ಲಕ್ಷಣಂ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ ನರ್ಸರಿಯಿಂದ ಸ್ನಾತಕೋತ್ತರದವರೆಗೆ ಎಲ್ಲ ವಿಭಾಗಗಳಲ್ಲೂ ಶಿಕ್ಷಣ ನೀಡುವ ಜತೆಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಬಿವಿವಿ ಸಂಘದಿಂದ ಆರ್‌ಸೆಟ್ ಸಂಸ್ಥೆ ಪ್ರಾರಂಭಿಸಲಾಯಿತು, ಇಲ್ಲಿ ತರಬೇತಿ ಪಡೆದ ೪೧,೦೦೦ ಜನರಲ್ಲಿ ಶೇ.೭೫ ರಷ್ಟು ಜನರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಬೇರೆಯವರಿಗೆ ಉದ್ಯೋಗ ನೀಡುವ ಜತೆಗೆ ತಮ್ಮ ಜೀವನದ ಜತೆಗೆ ಅನೇಕರ ಜೀವನ ನಡೆಸಲು ಸಹಕಾರಿಯಾಗಿದ್ದಾರೆ,
ಕೇಂದ್ರ ಸರಕಾರದ ಪಿಎಂಇಜಿಪಿ ಹಾಗೂ ವಿಶ್ವಕರ್ಮ ಯೋಜನೆ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಯೋಜನೆಗಳಡಿ ನಮ್ಮ ಆರ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಇಂದಿನ ದಿನಗಳಲ್ಲಿ ಕೌಶಲಯುಕ್ತ ಚಾಲಕರು, ಅಡಿಗೆ ಮಾಡುವವರು ಹಾಗೂ ಸೆಕ್ಯೂರಿಟಿ ಗಾರ್ಡ್ಗಳ ಹೆಚ್ಚಿನ ಅವಶ್ಯಕತೆ ಇದ್ದು, ಈ ಬಗ್ಗೆ ತರಬೇತಿ ನೀಡುವಲ್ಲಿ ಸಂಸ್ಥೆ ಕಾರ್ಯಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿವಿವಿ ಸಂಘದ ಕೊಟಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ವೆಬ್‌ಸೈಟ್‌ನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಬಿಡುಗಡೆಗೊಳಿಸಿದರು. ಉದಯೋನ್ಮುಖ ಉದ್ದಿಮೆದಾರರ ಯಶೋಗಾಥೆಗಳ ಪುಸ್ತಕವನ್ನು ಸಂಸದ ಪಿ.ಸಿ.ಗದ್ದಿಗೌಡರ ಬಿಡುಗಡೆಗೊಳಿಸಿದರು.
ಸನ್ಮಾನ: ಸಂಘದ ಆರ್‌ಸೆಟ್‌ನಲ್ಲಿ ತರಬೇತಿ ಪಡೆದು, ಸ್ವಂತ ಉದ್ಯಮ ಪ್ರಾರಂಭಿಸಿದವರನ್ನು ಹಾಗೂ ಆರ್‌ಸೆಟ್ ಸಂಸ್ಥೆಯ ಇಲ್ಲಿಯವರೆಗಿನ ಮುಖ್ಯಸ್ಥರನ್ನು ಸತ್ಕರಿಸಲಾಯಿತು.
ವೇದಿಕೆಮೆಲೆ ಮುಂಬೈನ್ ಕೊಟಕ ಮಹೀಂದ್ರಾ ಬ್ಯಾಂಕ್‌ನ ನಿಶಾದ ದಾತರ್, ಬೆಂಗಳೂರಿನ ಕೋಟಕ್ ಮಹೀಂದ್ರಾ ಬ್ಯಾಂಕನ ಎಸ್.ಇ.ನಟರಾಜ, ರಾಜು ಕೋರಿ, ಕೆ.ಎನ್.ಮಂಜುನಾಥ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಿವಾನಂದ ಶಾಭಾದಿ, ಬಸವರಾಜ ದೆಸಾಯಿ, ಎಸ್.ಆರ್.ಮನಹಳ್ಳಿ, ಅಶೋಕ ಸಜ್ಜನ,ಕುಮಾರ ಯಳ್ಳಿಗುತ್ತಿ, ಮಹಾಂತೇಶ ಶೆಟ್ಟರ ಸೇರಿದಂತೆ ಸಂಘದ ವಿವಿದ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ೨೬ ರಿಂದ ೨೮ ವರೆಗೆ ನಡೆಯುವ ಮೂರುದಿನಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಂಸದ ಗದ್ದಿಗೌಡರ ಚಾಲನೆ ನೀಡಿದರು.