ಜಿಲ್ಲೆ

ನಿರಾಶ್ರಿತ ಕೇಂದ್ರದಲ್ಲಿ ಮಹಿಳೆ ಸಾವು

ತುಮಕೂರು: ಕೋರ ಪೊಲೀಸ್​ ಠಾಣೆ ವ್ಯಾಪ್ತಿ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿದ್ದ 55 ವರ್ಷದ ಮಂಜುಳಾ ಎಂಬ ಹೃದಯ ಸಂಬಂಧಿ ಅಥವಾ ಇನ್ಯಾವುದೋ ಕಾಯಿಲೆಯಿಂದ ಮೇ.29ರಂದು ಮೃತಪಟ್ಟಿದ್ದಾರೆ ಎಂದು ಅಧೀಕ್ಷಕ ಮಾರಪ್ಪ ಠಾಣೆಗೆ ದೂರು ನೀಡಿದ್ದಾರೆ. ತುಮಕೂರು ಬಸ್​ ನಿಲ್ದಾಣದ ಬಳಿ 2024ರ ಜುಲೈ 25ರಂದು ಭಿಕ್ಷಾಟನೆಯಲ್ಲಿ ತೊಡಗಿದ್ದ ಈಕೆಯನ್ನು ನಿರಾಶ್ರಿತ ಪರಿಹಾರ ಕೇಂದ್ರದ ವಶಕ್ಕೆ ಪಡೆದು ದಾಖಲು ಮಾಡಿಕೊಂಡು ಆಶ್ರಯ ನೀಡಲಾಗಿತ್ತು. ಈ ಸಂದರ್ಭದಲ್ಲಿ ಈಕೆಯ ಹೆಸರು ಮಂಜುಳಾ ಹಾಗೂ ಪತಿ ನಾಗರಾಜು ಎಂದು ತಿಳಿಸಿದ್ದು, ವಾರಸುದಾರರು ಯಾರೆಂದು ಹೇಳಿರುವುದಿಲ್ಲ.

ಮೃತೆ 165 ಸೆಂಮೀ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಲ ಕಣ್ಣಿನ ಕೆಳಗೆ ಮಚ್ಚೆ ಇರುತ್ತದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.0816- 2278000, 22722340, 22725301, 2242006, ಮೊ.9480802900-ಸಂಪರ್ಕಿಸಿ.