ಜಿಲ್ಲೆ

ನಿರಂತರ ಅಭ್ಯಾಸದಿಂದ ಗುರಿ ಸಾಧನೆ

ಲೋಕೇಶ್ ಮನು. ಡಿ

ಕಂಪಲಾಪುರ: ಯಾವುದೇ ಚಟುವಟಿಕೆಯಾಗಲಿ ನಿರಂತರವಾಗಿ ಅಭ್ಯಾಸ ಮಾಡಿದರೆ ಗುರಿ ಮುಟ್ಟುವುದು ಸುಲಭ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶಿವರಾಜ್ ತಿಳಿಸಿದರು.


ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಓದು-ಬರಹಕ್ಕೆ ಮಾತ್ರ ಸೀಮಿತವಾಗಿರಬಾರದು. ಬದಲಾಗಿ ಸರ್ಕಾರ ರೂಪಿಸಿರುವ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾನಸಿಕ ಸ್ಥೈರ್ಯ ಮತ್ತು ಬುದ್ಧಿಮಟ್ಟವನ್ನು ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಸಿಆರ್‌ಪಿ ಸುದರ್ಶನ್ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಕುಮಾರ್, ಶ್ರೀಧರ್, ಗಿರಿಧರ್ ಪತಿಭಾ ಮಾತನಾಡಿದರು. ಕಿರಿಯ ಪ್ರಾಥಮಿಕ ಶಾಲೆಯ 16, ಹಿರಿಯ ಪ್ರಾಥಮಿಕ ಶಾಲೆಗಳಿಗೆ 18 ಸ್ಪರ್ಧೆಗಳನ್ನು ನಡೆಯಿತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕ್ಲಸ್ಟರ್‌ನಿಂದ ವರ್ಗಾವಣೆಗೊಂಡ ಹಾಗೂ ಹೊಸದಾಗಿ ಬಂದ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪೂರ್ಣಕುಂಭದೊಂದಿಗೆ ವಿವಿಧ ವೇಷಭೂಷಣ ತೊಟ್ಟ ಮಕ್ಕಳು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖ್ಯಶಿಕ್ಷಕರಾದ ದಯಾನಂದ, ಮಹದೇವ್, ನಟೇಶ್, ದೇವರಾಜ್, ನಾಗೇಂದ್ರ, ಶ್ರೀನಿವಾಸ್‌ಗೌಡ, ದೆಬೋರಾ, ನಿಲುಫರ್, ರಿಯಾಜ್, ಚಂದ್ರಶೇಖರ, ರಮೇಶ್, ಜಯಸ್ವಾಮಿ, ಮನೋಹರ್, ಶಿವಶಂಕರ್, ರವೀಂದ್ರ, ಶ್ರೀನಿಧಿ, ಗ್ರಾ.ಪಂ. ಸದಸ್ಯ ಶ್ರೀಪತಿ, ಮುಖಂಡರಾದ ಡಿ.ಟಿ.ಸ್ವಾಮಿ, ಪ್ರಕಾಶ್, ಐ.ಎಸ್.ಗೋಪಿ, ಹಬೀಬ್, ತಮ್ಮಯ್ಯ , ಕುಮಾರ್ ಇತರರು ಇದ್ದರು.