ಜಿಲ್ಲೆ

ನಿರಂತರ ಅಧ್ಯಯನದಿಂದ ಯಶಸ್ಸು


ತಲ್ಲೂರ: ಮಕ್ಕಳೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಹೆಚ್ಚಿನ ಸಾಧನೆ ಮಾಡಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿವ್ಯಾ ಗಾಣಿಗೇರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳು ಉತ್ತಮ ಶಿಣ ಪಡೆದು ಸಮಾಜಕ್ಕೆ ಉನ್ನತ ಕೊಡುಗೆ ನೀಡುವಂತಾಗಲಿ ಎಂದು ಹಾರೆಸಿದರು.

ಬಾಗೋಜಿಕೊಪ್ಪದ ಡಾ.ಮುರುರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಯಂದಿರು ಧಾರಾವಾಹಿ ನೋಡುವುದು ಬಿಟ್ಟು ಮಕ್ಕಳ ಜತೆ ಮಹಾನ್​ ವ್ಯಕ್ತಿಗಳ ಜೀವನ ಕಥನ ತಿಳಿಸಿಕೊಡಬೇಕು. ಮಕ್ಕಳಲ್ಲಿ ಉತ್ತಮ ಮೌಲ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.

ಶಿಕ ಯು.ಡಿ.ತಲ್ಲೂರ, ಮುಖ್ಯ ಶಿಕ ಡಿ.ಡಿ.ಭೋವಿ, ಶಿವಾನಂದ ಅಣ್ಣಿಗೇರಿ, ನಿವತ್ತ ಮುಖ್ಯಶಿಕರಾದ ಎ.ಬಿ.ಬಾಣದಾರ, ಎ.ವಿ.ಇಂಗಳೆ ಮಾತನಾಡಿದರು. ತೊರಗಲ್ಲ ಮಠದ ದೀಪಕ ಸ್ವಾಮಿ, ಜಗದೀಶ ಹೊಸಮಠ ಸಾನ್ನಿಧ್ಯ ವಹಿಸಿದ್ದರು. ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ ಅಧ್ಯತೆ ವಹಿಸಿದ್ದರು. ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಪಿಕೆಪಿಎಸ್​ ಅಧ್ಯ ಮಹಾರುದ್ರಪ್ಪ ಉಪ್ಪಿನ, ಪಿಡಿಒ ಎಚ್​.ಕೆ.ಚೌರಡ್ಡಿ, ಯರಗಟ್ಟಿ ತಾಲೂಕು ಗಾಣಿಗೇರ ಸಮಾಜದ ಅಧ್ಯ ಅಶೋಕ ಗಾಣಿಗೇರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಗಾಣಿಗೇರ, ಚಂಬನ್ನ ಲಕ್ಕನ್ನವರ, ಮಹಾಂತೇಶ ಉಪ್ಪಿನ, ಕಲ್ಮೇಶ ಬಾಲರಡ್ಡಿ, ಶಂಕರ ಗಾಣಿಗೇರ, ಶಿಕ ಬಿ.ಬಿ.ಅಣ್ಣಿಗೇರಿ ಇತರರು ಇದ್ದರು.