ಸಂಕೇಶ್ವರ: ಮಾನಸಿಕ, ದೈಹಿಕವಾಗಿ ಸದೃಢರಾಗಿರಲು ವಿದ್ಯಾರ್ಥಿಗಳು ನಿಯಮಿತವಾಗಿ ಯೋಗಾಭ್ಯಾಸ ಮಾಡಬೇಕು ಎಂದು ಯೋಗಗರು ಬಿ.ಡಿ. ನಾಗರಾಳಿ ಹೇಳಿದರು.
ಇಲ್ಲಿನ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಶಾಲಾ ಎಸ್‌ಎಂಸಿ ಸದಸ್ಯ ಡಾ. ಸಂತೋಷ ಹಿರೇಮಠ ಮಾತನಾಡಿ, ವ್ಯಕ್ತಿಯ ಸರ್ವಾಂಗೀಣ ಆರೋಗ್ಯ ಹೆಚ್ಚಿಸಲು ಯೋಗ ವರದಾನ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕಿ ಸುಮಲತಾ ಕಣಗಲಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಣ ಹಂತದಲ್ಲಿಯೇ ಮಕ್ಕಳಲ್ಲಿ ಯೋಗಾಸಕ್ತಿ, ಕಲೆ, ಕ್ರೀಡೆ ಪ್ರೋತ್ಸಾಹಿಸುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಬ್ರಿಲಿಯಂಟ್ ಸಂಸ್ಥೆ ಶ್ರಮಿಸಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸರಳ ಯೋಗಾಸನ ಮತ್ತು ವ್ಯಾಯಾಮ ಹೇಳಲಾಯಿತು. ಪ್ರಾಣಾಯಾಮ ಮತ್ತು ಧ್ಯಾನಗಳ ಮಹತ್ವ ತಿಳಿಸಲಾಯಿತು. ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.