ಎನ್.ಆರ್.ಪುರ ಪುಷ್ಪ ಆಸ್ಪತ್ರೆಯಲ್ಲಿ ಕ್ಷಯ ರೋಗ ಅರಿವು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಸಾರ್ಥಕ್ ಗೌಡ, ಸಿಸ್ಟರ್ ಪ್ರಿನ್ಸಿ, ಎಚ್.ಕೆ.ಕೃಷ್ಣಮೂರ್ತಿ, ಪವನ್ಕರ್ ಇತರರಿದ್ದರು. 
ಜಿಲ್ಲೆ

ನಿಯಮಿತ ಚಿಕಿತ್ಸೆಯಿಂದ ಕ್ಷಯ ನಿವಾರಣೆ

ಎನ್.ಆರ್.ಪುರ: ವಿದ್ಯಾರ್ಥಿಗಳಿಗೆ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ರೀತಿಯ ತರಬೇತಿಯನ್ನು ಜೆಸಿಐ ನೀಡುತ್ತಿದೆ ಎಂದು ಪುಷ್ಪ ಆಸ್ಪತ್ರೆಯ ಸಿಸ್ಟರ್ ಜಸ್ಲಿನ್ ಹೇಳಿದರು.

ಪುಷ್ಪ ಆಸ್ಪತ್ರೆ, ಜ್ವಾಲಾ ಮಾಲಿನಿ ಜೇಸಿ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ಪುಷ್ಪ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ಷಯದ ಕುರಿತು ಅರಿವು ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವನ್ನು ಜೇಸಿ ನಡೆಸುತ್ತಿದೆ ಎಂದರು.

ಜಿಲ್ಲಾ ಹಿರಿಯ ಡಿಆರ್‌ಟಿಬಿ ಮೇಲ್ವಿಚಾರಕ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿ, ಕ್ಷಯ ಒಬ್ಬರಿಂದ ಒಬ್ಬರಿಗೆ ಗಾಳಿ ಮೂಲಕ ಹರಡುವ ಮಾರಣಾಂತಿಕ ಕಾಯಿಲೆ. ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಕೂಡ ಲಭ್ಯವಿದೆ. ಆರು ತಿಂಗಳೊಳಗೆ ಉಚಿತ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಪಡಿಸಬಹುದು. ಸರ್ಕಾರದಿಂದ ಕ್ಷಯ ರೋಗಿಗೆ ಪ್ರತಿ ತಿಂಗಳೂ ಪೌಷ್ಟಿಕ ಆಹಾರಕ್ಕೋಸ್ಕರ 2000 ರೂ. ರೋಗಿಯ ಬ್ಯಾಂಕ್ ಖಾತೆಗೆ ನೀಡಲಾಗುವುದು ಎಂದು ತಿಳಿಸಿದರು.

ಸೆಲ್ಯೂಟ್ ಟು ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಜಿಲ್ಲಾ ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಎಚ್.ಕೆ.ಕೃಷ್ಣಮೂರ್ತಿ ಅವರನ್ನು ಮತ್ತು ಪುಷ್ಪ ಆಸ್ಪತ್ರೆ ಾರ್ಮಸಿ ಅಧಿಕಾರಿ ಸಿಸ್ಟರ್ ಜೋಳಿ ಜೋಸ್ ಅವರನ್ನು ಸನ್ಮಾನಿಸಲಾಯಿತು. ಸಿಸ್ಟರ್ ಪ್ರಿನ್ಸಿ, ಸಾರ್ಥಕ್ ಗೌಡ, ಹಿರಿಯ ಕ್ಷಯ ಚಿಕಿತ್ಸಾ ಮೇಲ್ವಿಚಾರಕ ಪವನ್ಕರ್ ಇತರರಿದ್ದರು.