ಜಿಲ್ಲೆ

ನಿಯಮಾವಳಿಗಳನ್ನು ಪಾಲಿಸಿದ್ದರೆ ಕಠಿಣ ಕ್ರಮ ಎದುರಿಸಿ

ಚಿತ್ರದುರ್ಗ: ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೆ,ಅವುಗಳನ್ನು ಉಲ್ಲಂಘಿಸುವ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂ ದು ಡಿಸಿ ಟಿ.ವೆಂಕಟೇಶ್ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದರು.

ತಮ್ಮ ಕಚೇರಿಯಲ್ಲಿ ಬುಧವಾರ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿ,ನಿಯಮಗಳನ್ನು ತಪ್ಪದೆ ಪಾಲಿಸ ಬೇ ಕು. ಒಂದು ವೇಳೆ ಉಲ್ಲಂಘನೆ ದೂರು ಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು. ಪ್ರವೇಶ ಶುಲ್ಕದ ಮಾಹಿತಿ ಪ್ರಚುರಪಡಿಸದಿ ರುವುದು. ಒಂದೇ ಬಾರಿಗೆ ದೇಣಿಗೆ,ಶುಲ್ಕ ಕಟ್ಟ ಬೇಕೆನ್ನುವುದು,ಮೂಲಸೌಲಭ್ಯಗಳ ಕೊರತೆ.

ನಾಮಕಾವಸ್ಥೆಗೆ ಶಿಕ್ಷಣ ಸಂಸ್ಥೆ ನಡೆಸುವುದು,ಉತ್ತಮ ಫಲಿತಾಂಶಕ್ಕೆ ಗಮನಹರಿಸದಿರುವುದು, ಶಿಕ್ಷಕರಿಗೆ ಓರಿಯಂಟೇಷನ್ ವರ್ಕ್‌ಶಾ ಪ್ ಮಾಡದಿರುವುದು. ಅರ್ಹತೆ ಇಲ್ಲದ ಶಿಕ್ಷಕರ ನೇಮಕ ಸೇರಿದಂತೆ ಕೆಲವು ಶಿಕ್ಷಣ ಸಂಸ್ಥೆಗಳ ವಿರುದ್ಧ ನಾನಾ ದೂರುಗಳನ್ನು ಪರಿಶೀಲಿಸಿ, ಉಲ್ಲಂಘನೆಯಾಗಿದ್ದರೆ ಅಂಥ ಸಂಸ್ಥೆಗಳನ್ನು ಶಾಶ್ವತವಾಗಿ ಮುಚ್ಚಿಸಲಾಗುವುದು ಎಂದರು.

ಪ್ರತಿ ತಾಲೂಕಿಗೆ,ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ನಿಯಮಗಳ ಪ್ರಕಾರ ಪ್ರವೇಶ ಪ್ರಕ್ರಿಯೆ ಪರಿಶೀಲನೆಗೆ ಶಿಕ್ಷಣ ಅಧಿಕಾರಿಗಳ ನ್ನು ಹೊರತುಪಡಿಸಿ ಇತರೆ ಇಲಾಖೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳ ನೇಮಕಕ್ಕೆ ಚಿಂತಿಸಲಾಗಿದೆ. ಸೀಟುಗಳ ಲಭ್ಯತೆ,ಪ್ರವೇಶ ವೇಳಾಪಟ್ಟಿ ಕಡ್ಡಾಯವಾಗಿ ಶಾಲಾ ಫಲಕದಲ್ಲಿ ಪ್ರಕಟಿಸಬೇಕು. ಪ್ರತಿ ವರ್ಷ ಏಪ್ರಿಲ್ ನಂತರವೇ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಬೇಕು. ಪ್ರತಿ ಶಾಲೆಯಲ್ಲೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯಗಳಿರಬೇಕು. ಮಕ್ಕಳ ಸುರಕ್ಷತೆಗಾಗಿ ಅಗ್ನಿನಂದಕ,ಸಿಸಿ ಕ್ಯಾಮೆರಾಗ ಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.

ಲೈಂಗಿಕ ಕಿರುಕುಳದಂಥ ಪ್ರಕರಣಗಳನ್ನು ತಪ್ಪಿಸಲು ಆಡಳಿತ ಮಂಡಳಿಗಳು ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅರ್ಹ ವಿದ್ಯಾ ರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳ ಬೇಕೆಂದು ತಾಕೀತು ಮಾಡಿದರು. ಡಿಡಿಪಿಐ ಎಂ.ಆರ್.ಮಂಜುನಾಥ ಮಾತನಾ ಡಿ,ಜಿಲ್ಲೆಯಲ್ಲಿ ಅನುದಾನ ಸಹಿತ ಶಾಲೆಗಳಲ್ಲಿ 73 ಪ್ರಾಥಮಿಕ,204 ಪ್ರೌಢಶಾಲೆಗಳು ಇವೆ. ಅನುದಾನ ರಹಿತ ಶಾಲೆಗಳಲ್ಲಿ 252 ಪ್ರಾಥ ಮಿಕ ಶಾಲೆಗಳು ಹಾಗೂ 138 ಪ್ರೌಢಶಾಲೆಗಳಿವೆ. ಯಾವುದೇ ಕಾರಣಕ್ಕೂ ಎಲ್‌ಕೆಜಿ ಮತ್ತು 1ನೇ ತರಗತಿಗೆ ಪ್ರವೇಶಕ್ಕೆ ಪರೀಕ್ಷೆ,ಸಂದರ್ಶ ನ ನಡೆಸುವಂತಿಲ್ಲ.

2025-26ನೇ ಸಾಲಿಗೆ ಆರ್‌ಟಿಇ ಅಡಿ ಮೀಸಲಿರುವ ಸೀಟುಗಳಿಗೆ ಪ್ರವೇಶ ಮತ್ತು ದಾಖಲಾತಿ ಪ್ರಕ್ರಿಯೆ ಅನುದಾನಿತ ಶಾಲೆಗಳಿಗೆ ಚಾಲ್ತಿಯಲ್ಲಿರುತ್ತದೆ.ಆರ್‌ಟಿಇ ಅಡಿ 56 ಶಾಲೆಗಳಲ್ಲಿ 247 ಸೀಟುಗಳು ಲಭ್ಯ ಇವೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಗೆ 4 ವರ್ಷ ಪೂರ್ಣಗೊಂಡಿರುವ,ಯುಕೆಜಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣ ಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಅವಕಾಶವಿದೆ ಎಂದರು. ಜಿಪಂ ಎಸ್.ಜೆ.ಸೋಮಶೇಖರ್,ಪಿಯು ಡಿಡಿ ಆರ್.ಪುಟ್ಟಸ್ವಾಮಿ,ಶಿಕ್ಷಣಾಧಿಕಾರಿ ಸಿದ್ದಪ್ಪ ಮತ್ತಿತರರು ಇದ್ದರು.