ಬಾಗಲಕೋಟೆ: ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಲೈಸನ್ಸ್ ಅಮಾನತ್ತುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸದಾಗಿ ಚಾಲನಾ ಪತ್ರ ಪಡೆಯಲು ಬರುವ ಚಾಲಕರಿಗೆ ಒಂದು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತಿದೆ. ಚಾಲನಾ ಪತ್ರದ ಮಹತ್ವ, ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು, ವಾಹನವನ್ನು ವಿಮೆಗೆ ಒಳಪಡಿಸುವುದು ಸೇರಿದಂತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ ನಂತರ ಪರೀಕ್ಷೆ ತೆಗೆದುಕೊಂಡ ನಂತರ ಪರವಾನಿಗ ಪತ್ರ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಳೆದ ಏಪ್ರಿಲ್‌ನಿಂದ ಜುಲೈ ವರೆಗೆ ಪೊಲೀಸ್ ಮತ್ತು ನ್ಯಾಯಾಲದಿಂದ ಬಂದಿರುವ ೧೪೭ ಚಾಲನಾ ಅನುಜ್ಞಾಪನಾ ಪತ್ರಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ ೧೩೦ನ್ನು ಅಮಾನತ್ತು ಗೊಳಿಸಲಾಗಿದೆ. ಬಾಕಿ ೧೭ ಪ್ರಕರಣಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಅಪಘಾತ ಉಂಟು ಮಾಡಿ ಪ್ರಕರಣದ ದಾಖಲು ಆದಲ್ಲಿ ಅಂತವರ ಚಾಲನಾ ಲೈಸೆನ್ಸ್ ರದ್ದರಿಗೆ ಕ್ರಮವಹಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ರಸ್ತೆ ಮತ್ತು ಹೆದ್ದಾರಿ ಪಕ್ಕದಲ್ಲಿರುವ ಡಾಬಾ ಮತ್ತು ಹೋಟೆಲ್‌ಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾರಾಟದಿಂದ ಅಪಘಾತ ಪ್ರಕರಣಗಳು ಕಂಡುಬರುತ್ತಿದ್ದವು. ಈ ಹಿನ್ನಲೆಯಲ್ಲಿ ಕ್ರಮಕೈಗೊಳ್ಳಲು ಅಬಕಾರಿ ಇಲಾಖೆಗೆ ಸೂಚಿಸಿದ ಹಿನ್ನಲೆಯಲ್ಲಿ ೩೯ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಪ್ರತಿ ಶಾಲೆ-ಕಾಲೇಜುಗಳ ಓರ್ವ ಶಿಕ್ಷಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಕುರಿತು ತರಬೇತಿ ನೀಡಿ ಅವರ ಮೂಲಕ ಮಕ್ಕಳಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಸ್ತೆ ಅಪಘಾತಗಳಿಂದ ಉಂಟಾಗುವ ಸಾವು-ನೋವುಗಳನ್ನು ಕಡಿಮೆಗೊಳಿಸಲು ಪೊಲೀಸ್ ಇಲಾಖೇ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಜಿಗ್-ಜಾಗ್ ಬ್ಯಾರಿಕೇಡ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯ ಅಽಕಾರಿ ಹಾಗೂ ಸಿಬ್ಬಂದಿಗಳಿಂದ ನಿರಂತರವಾಗಿ ಜಾಗೃತಿ ಮೂಡಿಸು ಕಾರ್ಯ ನಡೆದಿದೆ. ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕ, ಥರ್ಮೋಪ್ಲಾಸ್ಟ ಮಾರ್ಕಿಂಗ್ ಅಳವಡಿಸಲು ತುರ್ತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಗದ್ದನಕೇರಿ ಕ್ರಾಸ್‌ನಲ್ಲಿ ಸರ್ಕಾರಿ ಬಸ್‌ಗಳು ಎಲ್ಲಂದರಲ್ಲಿ ನಿಲ್ಲಿಸುತ್ತಿರುವದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೂಚಿಸದ ಸ್ಥಳದಲ್ಲಿ ನಿಲ್ಲಿಸಲು ತುರ್ತು ಕ್ರಮವಹಿಸಲು ರಸ್ತೆ ಸಾರಿಗೆ ಸಂಸ್ಥೆಯ ಅಽಕಾರಿಗಳಿಗೆ ಸೂಚಿಸಿದರು. ಬೀಳಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಾಕಷ್ಟು ಏರಿಳಿತಗಳನ್ನು ಸರಿಪಡಿಸಿ ಡಾಂಬರೀಕರಣ ಮಾಡಿದರು ಸಹ ಮಳೆಗಾಲ ಇರುವದರಿಂದ ಮತ್ತೆ ಸಮಸ್ಯೆಯಾಗುತ್ತಿದೆ. ಮಳೆ ನಂತರ ತಕ್ಷಣವೇ ರಂಬಲ್ ಸ್ಟ್ರೀಪ್ಸಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಈಚೆಗೆ ನಡೆದ ಮಾರಣಾಂತಿಕ ರಸ್ತೆ ಅಪಘಾತಗಳ ಹಾಗೂ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಕಪ್ಪು ಸ್ಥಳಗಳ ಸುಧಾರಣೆಗೆ ತೆಗೆದುಕೊಳ್ಳಬಹುದಾದ ಕ್ರಮವ ಬಗ್ಗೆ ತಿಳಿಸಿದರು. ಪೊಲೀಸ್ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ೨೮ ಕಪ್ಪು ಸ್ಥಳಗಳನ್ನು ಗುರುತಿದ್ದು, ಅಲ್ಲಿಯ ಸುಧಾರಣೆಗೆ ಹಾಗೂ ಸಂಚಾರಿ ಸೂಚನಾ ಫಲಕಗಳ ಅಳವಡಿಸುವ ಕುರಿತು ಸಂಬಂಧಿಸಿದ ಅಽಕಾರಿಗಳೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಇಂತಹ ಅನೇಕ ಕಪ್ಪು ಸ್ಥಳಗಳಿದ್ದು, ಪಟ್ಟಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಕುಲಕರ್ಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಲ್.ಹೊಸಮನಿ ಸೇರಿದಂತೆ ವಿವಿಧ ಇಲಾಖೆಯ ಅಽಕಾರಿಗಳು ಉಪಸ್ಥಿತರಿದ್ದರು.