ಕಲಬುರಗಿ: ಕೋಲಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದ್ದು, ಅದನ್ನು ಮರೆಮಾಚಲು ಮಲ್ಲಿಕಾರ್ಜುನ ಖರ್ಗೆ ಚರ್ಚೆಗೆ ಬಂದಿಲ್ಲ ಎಂದು ಸಂಸದ ಡಾ.ಉಮೇಶ ಜಾಧವ್ ಸುಳ್ಳು ಹೇಳುತ್ತಿದ್ದಾರೆ. ಸಂಸತ್ತಿನ ನಿಯಮಗಳ ಅರಿವಿಲ್ಲದ ಅವಿವೇಕಿ ಜಾಧವ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
೨೦೧೯ರ ಲೋಕಸಭೆ ಚುನಾವಣೆಯಲ್ಲಿ ಕೋಲಿ, ಕಬ್ಬಲಿಗ, ಕುರುಬ ಸಮಾಜವನ್ನು ಎಸ್‌ಟಿ ಸೇರಿಸುವುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ರವಿಕುಮಾರ ಹೇಳಿದ್ದರು. ಇದೀಗ ಅವರೆಲ್ಲಿದ್ದಾರೆ ತಿಳಿದಿಲ್ಲ. ಅವರು ಮತ ಕೇಳಲು ಬಂದರೆ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ. ಅದಕ್ಕಾಗಿ ಉಸ್ತುವಾರಿ ಬದಲಾಯಿಸಿದ್ದಾರೆ. ಇತ್ತ ಕೊಟ್ಟ ಮಾತು ಉಳಿಸಲು ಆಗದೆ ಡಾ.ಜಾಧವ್ ಕೈಲಾಗದೆ ಸುಳ್ಳು ಹೇಳುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಬಲಿಷ್ಠ ಪ್ರಧಾನಿ ಅಂತಾರೆ ಆದರೆ ಎಸ್‌ಟಿ ಹೋರಾಟ ಕಾಣುತ್ತಿಲ್ಲ. ಮೋದಿ ದೇಶದೆಲ್ಲೆಡೆ ಸುಳ್ಳು ಹೇಳುತ್ತಿದ್ದರು. ಜಾಧವ್ ಪ್ರಾದೇಶಿಕವಾಗಿ ಸುಳ್ಳು ಹೇಳುತ್ತಿದ್ದಾರೆ. ಅಸಮರ್ಥರಾಗಿದ್ದರೆ ಜಾಗ ಖಾಲಿ ಮಾಡಲಿ. ರಾಜ್ಯಸಭೆ, ಲೋಕಸಭೆ ನಿಯಮ ಗೊತ್ತಿದ್ದರೆ ಜಾಧವ್ ಅವಿವೇಕಿ ತರ ಮಾತಾಡುತ್ತಿರಲಿಲ್ಲ ಎಂದು ಕಿಡಿ ಕಾರಿದರು.
ಮಾಲೀಕಯ್ಯ ಗುತ್ತೇದಾರ ಬಿಜೆಪಿಯಿಂದ ಎರಡು ಕಾಲು ಹೊರಗಿಟ್ಟಿದ್ದು, ವೈಯಕ್ತಿಕವಾಗಿ ನನ್ನೊಂದಿಗೆ ಮಾತನಾಡಿಲ್ಲ. ಕೆಪಿಸಿಸಿ ಅಧ್ಯP್ಷÀರನ್ನು ಭೇಟಿಯಾಗಿz್ದÁರೆ. ಪP್ಷÀದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಮೋದಿ, ಜಾಧವ್ ಬಂದರೂ ಸ್ವಾಗತಿಸುತ್ತೇವೆ ಎಂದರು.
ಕಾAಗ್ರೆಸ್ ಮುಖಂಡರಾದ ಕಿರಣ ದೇಶಮುಖ, ಶಿವಕುಮಾರ ಹೊನಗುಂಟಿ, ಈರಣ್ಣ ಝಳಕಿ, ಲಚ್ಚಪ್ಪ ಜಮಾದಾರ, ಪ್ರವೀಣ ಹರವಾಳ ಇದ್ದರು.
ಬಿಲ್ ತರದೇ ಎಲ್ಲಿ ಚರ್ಚೆ ಮಾಡಬೇಕು?: ಕೋಲಿ, ಕಬ್ಬಲಿಗ ವಿಷಯ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ಇರಲಿಲ್ಲ ಎನ್ನುವ ಜಾಧವ್ ಹೇಳಿಕೆಗೆ ಪ್ರತ್ರಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ಪ್ರಸ್ತಾವನೆ ಒಪ್ಪಿಯೇ ಕೇಂದ್ರಕ್ಕೆ ಕಳುಹಿಸಿತ್ತು. ಬಿಜೆಪಿ ಸರ್ಕಾರ ಪ್ರತಿಪಕ್ಷದವರನ್ನು ಸಸ್ಪೆಂಡ್ ಮಾಡಿ, ಚರ್ಚೆ ಇಲ್ಲದೆ ಬಿಲ್‌ಗಳನ್ನು ಪಾಸ್ ಮಾಡಿದರು. ಕೋಲಿ ಕಬ್ಬಲಿಗ ಹಾಗೂ ಕುರುಬ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಿಲ್ ಮಂಡಿಸಿಯೇ ಇಲ್ಲ. ಚರ್ಚೆಗೆ ಬರುವ ಮಾತೆ ಇಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು.