ಜಿಲ್ಲೆ

ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಬಸ್, ಕಿಡಕಿಯಿಂದ ಹೊರಬಂದು ಪಾರಾದ ಪ್ರಯಾಣಿಕರು

ನವಲಗುಂದ: ಕೆಎಸ್​ಆರ್​ಟಿಸಿ ಬಸ್​ವೊಂದು ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಘಟನೆ ನವಲಗುಂದ ತಾಲೂಕಿನ ಶಿರಕೋಳ-ಮೊರಬ ಗ್ರಾಮದ ಮಧ್ಯೆ ಮಂಗಳವಾರ ನಡೆದಿದೆ.

ಬಸ್​ನಲ್ಲಿ 20ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರು ಬಸ್ ಕಿಡಕಿಯಿಂದ ಹೊರಬಂದು ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ.

ಧಾರವಾಡದಿಂದ ನವಲಗುಂದ ತಾಲೂಕಿನ ಹನಸಿ ಗ್ರಾಮದ ಕಡೆಗೆ ಬಸ್ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಬಸ್ ಹೊಲಕ್ಕೆ ನುಗ್ಗುತ್ತಿದ್ದಂತೆ ಚಾಲಕ ಪುಂಡಲೀಕ ಸೇರಿ ಪ್ರಯಾಣಿಕರು ಬೊಬ್ಬೆ ಹಾಕಿದ್ದಾರೆ. ಆಗ ಅಕ್ಕಪಕ್ಕದ ಹೊಲದಲ್ಲಿ ರೈತರು, ಶಿರಕೋಳ, ಮೊರಬ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಪಿಎಸ್​ಐ ಜಯಪಾಲ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.