ನಿಪ್ಪಾಣಿಯಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣ : ಶಾಸಕಿ ಜೊಲ್ಲೆ
ವಿಜಯವಾಣಿ ಸುದ್ದಿಜಾಲ ನಿಪ್ಪಾಣಿ
ಡಾ.ಬಿ.ಆರ್ ಅಂಬೇಡ್ಕರ್ ಭೇಟಿ ನೀಡಿದ್ದ ನಿಪ್ಪಾಣಿಯ ಗವಾನ ಎಂಬ ಸ್ಥಳದಲ್ಲಿ ಹತ್ತು ಎಕರೆ ಜಮೀನಿನಲ್ಲಿ ಅಂಬೇಡ್ಕರ್ ಸ್ಮಾರಕ ಮತ್ತು ವಸತಿ ನಿಲಯ ಸ್ಥಾಪಿಸಲಾಗುವದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಘೋಷಿಸಿದ್ದಾರೆ.
ನಿಪ್ಪಾಣಿಯಲ್ಲಿ ಭೀಮ ಹೆಜ್ಜೆಗೆ 100 ರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಕುದುರೆ ಮೇಲೆ ಕುಳಿತ ಬೃಹತ್ ಮೂರ್ತಿ ಮಾಡುತ್ತೇವೆ. ಒಂದು ಕೋಟಿ ಮೂವತ್ತು ಲಕ್ಷ ಬಿಜೆಪಿ ಸರ್ಕಾರ ಇದ್ದಾಗ ಬಂದಿದೆ. ನಾನು ವೈಯಕ್ತಿಕವಾಗಿ ಒಂದು ಕೋಟಿ, ಜೊಲ್ಲೆ ಗ್ರೂಪ್ ದಿಂದ ಒಂದು ಕೋಟಿ ಹಣ ಕೂಡಿಸಿ ಕೆಲಸ ಮಾಡ್ತೇವಿ. ಇಡೀ ದೇಶದಲ್ಲಿ ಅದ್ಬುತವಾದ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ನಿಪ್ಪಾಣಿ ಕಾರ್ಯಕ್ರಮ ನೋಡಿ ಕಾಂಗ್ರೆಸನವರು ಅತೀ ಎತ್ತರದ ಮೂರ್ತಿ ಮಾಡ್ತೇನಿ ಅಂತಾ ಹೇಳ್ತಿದ್ದಾರೆ. ಕಾಂಗ್ರೆಸ್ ನಲ್ಲಿ ದೀನದಲಿತರಿಗೆ ನ್ಯಾಯ ಸಿಗುವುದಿಲ್ಲ ಅಂತಾ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದ ಶಶಿಕಲಾ ಜೊಲ್ಲೆ ಹೇಳಿದರು.
ಸದನದಲ್ಲಿ ಅಂಬೇಡ್ಕರ್ ನಿಪ್ಪಾಣಿಗೆ ಬಂದ ವಿಚಾರ ಸರ್ಕಾರದ ಗಮನಕ್ಕೆ ತಂದಿದ್ದೆ.ಬೆಳಗಾವಿಯಲ್ಲಿ ಗಾಂಧೀಜಿ ಭೇಟಿ ಕಾರ್ಯಕ್ರಮ ಮಾಡಿದ ಹಾಗೇ ಬಿ.ಆರ್ ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು ನೂರು ವರ್ಷ ಆಯ್ತು. ಅವರದ್ದು ಕಾರ್ಯಕ್ರಮ ಮಾಡಬೇಕು ಅಂತಾ ಧ್ವನಿ ಎತ್ತಿದೆ.ಆದ್ರೇ ಸರ್ಕಾರದವರು ಕೇಳಿಲಿಲ್ಲ. ಗಾಂಧೀಜಿಯವರದ್ದು ಕಾರ್ಯಕ್ರಮ ಮಾಡಿದ್ರೂ.
ಆದ್ರೇ ಅಂಬೇಡ್ಕರ್ ಅವರ ಕಾರ್ಯಕ್ರಮ ಸರ್ಕಾರ ಮಾಡಲಿಲ್ಲ.ಗಾಂಧೀಜಿಯವರ ಬಗ್ಗೆ ನಮಗೆ ಗೌರವ ಇದೆ.ಆದ್ರೇ ಸ್ವಾತಂತ್ರ್ಯ ಬಂದ ಮೇಲೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಕಾರ್ಯಕ್ರಮ ಮಾಡಲಿಲ್ಲ.ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಗಮನಕ್ಕೆ ತಂದು ಇದಕ್ಕೆ ಒಪ್ಪಿ ಬೆಂಗಳೂರಿನಿಂದ ಭೀಮರಥಕ್ಕೆ ಚಾಲನೆ ನೀಡಿದರು ಎಂದು ಶಶಿಕಲಾ ಜೊಲ್ಲೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.