ಜಿಲ್ಲೆ

ನಿಧಿ ವಂತಿಗೆ ಪಾವತಿಸಿ

ಹೊಸಪೇಟೆ: 2024 ರ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ವಂತಿಕೆಯನ್ನು ಜ.15 ರೊಳಗೆ ಕಡ್ಡಾಯವಾಗಿ ಪಾವತಿಸಬೇಕಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರಪ್ಪ ಡಂಬೂರು ಮತ್ತೂರು ತಿಳಿಸಿದ್ದಾರೆ.

ನೋಂದಾಯಿತ ಕಾರ್ಖಾನೆಗಳು, ಪ್ಲಾಂಟೇಶನ್‌ಗಳು, ಕಾರ್ಯಗಾರಗಳು, ಮೋಟಾರು ದೊಡ್ಡ ಬಾಡಿಗೆ ಬಸ್ ಸೇವೆ, ವಿದ್ಯುತ್‌ನ್ನು ಉಪಯೋಗಿಸಿ 10ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುವ ಹಾಗೂ ವಿದ್ಯುತ್ ಉಪಯೋಗಿಸದೇ 20ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು ಮತ್ತು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ, ಐಟಿಬಿಟಿ ಸಂಸ್ಥೆಗಳು, ಚಾರಿಟೇಬಲ್, ಶಿಕ್ಷಣ ಸಂಸ್ಥೆಗಳು ಹಾಗೂ ಎರಡು ಕಾಯ್ದೆಗಳಿಡಿಯಲ್ಲಿ ನೋಂದಾಣಿಯಾದ ಎಲ್ಲಾ ಸಂಘ, ಸಂಸ್ಥೆಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ವಂತಿಕೆ ಪಾವತಿಸಬೇಕಾಗಿರುತ್ತದೆ. ಪ್ರತಿ ಕಾರ್ಮಿಕನಿಗೆ 20 ರೂ., ಕಾರ್ಖಾನೆಗಳ ಮಾಲೀಕರು, ಕಾರ್ಯಸಂಸ್ಥೆಗಳಿAದ 40 ರೂ.ಗಳಂತೆ ಒಟ್ಟು 60 ರೂ.ಗಳನ್ನು ಕಾರ್ಖಾನೆ, ಕಾರ್ಯಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಒಟ್ಟು ಸಿಬ್ಬಂದಿ ಮತ್ತು ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿದೆ. ವಂತಿಗೆ ಪಾವತಿಸಲು ಜ.15 ರಂದು ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ವಂತಿಗೆ ಪಾವತಿಸಬೇಕಾದ ವೆಬ್‌ಸೈಟ್ ವಿಳಾಸ: ತಿತಿತಿ.ಞಟತಿb.ಞಚಿಡಿಟಿಚಿಣಚಿಞಚಿ.gov.iಟಿ ನಿಯಮ ಪಾಲಿಸದ ಸಂಸ್ಥೆಗಳಿಗೆ ಮೊದಲ 3 ತಿಂಗಳಿಗೆ ವಾರ್ಷಿಕವಾಗಿ ಶೇ.12 ರಂತೆ ಹಾಗೂ ನಂತರದ ತಿಂಗಳಿಗೆ ವಾರ್ಷಿಕವಾಗಿ ಶೇ.18 ರಂತೆ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು. ಕಲ್ಯಾಣ ಆಯುಕ್ತರಿಂದ ತಪಾಸಣೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ತನಿಖೆಗೆ ಒಳಪಡಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9448765102 ಸಂಖ್ಯೆಗೆ ಕರೆ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.