ಜಿಲ್ಲೆ

ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ 27ರಂದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ)ಯ ಹುಬ್ಬಳ್ಳಿ ಕ್ಷೇತ್ರಿಯ ಕಚೇರಿಯು ಡಿ. 27ರಂದು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ 5 ಜಿಲ್ಲೆಗಳಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಆಯೋಜಿಸಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುನವಳ್ಳಿ ಗ್ರಾಮದ ಎಚ್​ಎಸ್​ಎಸ್ ಟೈಕ್ಸಟೈವ್ಸ್ ಪ್ರೖೆವೇಟ್ ಲಿಮಿಟೆಡ್, ಹುಬ್ಬಳ್ಳಿ ಬಸವ ವನ ಬಳಿಯ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್, ಗದಗನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಬೆಳಗಾವಿಯ ಉದ್ಯಮಬಾಗ್​ನ ವೇಗಾ ಆಟೋ ಅಕ್ಸೆಸರೀಸ್ ಪ್ರೖೆವೇಟ್ ಲಿಮಿಟೆಡ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಟಿಎಪಿಸಿಎಂಎಸ್ ಲಿಮಿಟೆಡ್​ನಲ್ಲಿ ನಡೆಯಲಿದೆ.

ಆಯಾ ಜಿಲ್ಲೆಯ ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು ಹಾಗೂ ಕಾರ್ವಿುಕ ಸಂಘಟನೆಯವರು ಭಾಗವಹಿಸಬಹುದಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕತ ರಾಮಕೇಶ ಮೀನಾ ತಿಳಿಸಿದ್ದಾರೆ.