ವಿಶೇಷ ವರದಿ ತುಮಕೂರು
ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿದ್ದರೂ ಮೀನುಗಾರಿಕೆ ಇಲಾಖೆ ಗಾಢ ನಿದ್ರೆಯಲ್ಲಿದೆ. ತುಂಬಿರುವ ಕೆರೆಯಲ್ಲಿ ಮೀನು ಸಾಕಲು ಪೂರಕ ವಾತಾವರಣವಿದ್ದರೂ ಸುಮ್ಮನಿರುವುದು ಸರ್ಕಾರಕ್ಕೆ ಆದಾಯ ಜಾಸ್ತಿಯಾದಂತೆ ಕಾಣಿಸುತ್ತಿದೆ. ಕೃಷಿಗೆ ಯೋಗ್ಯವಲ್ಲದ ಹಾಗೂ ಜೌಗು&ಚೌಳು&ಾರಯುಕ್ತ ಜಮೀನಿನಲ್ಲಿ ಮೀನು ಕೃಷಿ ಕೊಳ ನಿರ್ಮಿಸಲು ಅವಕಾಶವಿದ್ದರೂ ರೈತರಿಗೆ ಮಾಹಿತಿ ಕೊರತೆಯಿದೆ.
ಮೀನುಗಾರಿಕೆ ಇಲಾಖೆ ವ್ಯಾಪ್ತಿಯ 400 ಕೆರೆಗಳಿಂದ ಜಲವಿಸ್ತೀರ್ಣ 31336 ಹೆಕ್ಟೇರ್, ಗ್ರಾಪಂ ವ್ಯಾಪ್ತಿಯ 1319 ಕೆರೆಗಳಿಂದ ಜಲವಿಸ್ತೀರ್ಣ 17458 ಹೆಕ್ಟೇರ್ ಹಾಗೂ 4 ಜಲಾಶಯಗಳಿಂದ 3078 ಹೆಕ್ಟೇರ್ ಸೇರಿ 51872 ಹೆಕ್ಟೇರ್ ವಿಸ್ತಾರದ ಜಲಸಂಪನ್ಮೂಲ ಜಿಲ್ಲೆಯಲ್ಲಿದೆ. ಮೀನುಗಾರಿಕೆ ಇಲಾಖೆಯ 69 ಜತೆಗೆ ಒಟ್ಟು 142 ಕೆರೆಗಳಿಗೆ ಹೇಮಾವತಿ ನಾಲೆ ಮೂಲಕ ನೀರು ತುಂಬಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ ಮತ್ಸೋದ್ಯಮ ಕೊರಗುತ್ತಿದೆ.
ಕೆರೆ ತುಂಬಿದರೂ ಉತ್ಪಾದನೆ ಹೆಚ್ಚಾಗಲಿಲ್ಲ: ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ, 9046 ಸದಸ್ಯರಿರುವ 32 ಸಹಕಾರ ಸಂಗಳಿವೆ. ಜಿಲ್ಲೆಯಲ್ಲಿ ಕಳೆದ ವರ್ಷ ಭರ್ಜರಿ ಮಳೆ ಸುರಿದಿದ್ದರೂ 31500 ಟನ್ ಮೀನು ಉತ್ಪಾದನೆಯಾಗಿದೆ. ಬರಗಾಲದಲ್ಲಿಯೇ ಜಿಲ್ಲೆಯಲ್ಲಿ 9971 ಟನ್ ಮೀನು ಉತ್ಪಾದನೆಯಾದ ದಾಖಲೆಯಿದೆ. 2016&17ನೇ ಸಾಲಿನಲ್ಲಿ 9971, 2017&18ರಲ್ಲಿ 11784, 2018&19ರಲ್ಲಿ 11899, 2019&20ರಲ್ಲಿ 15073, 2020&21ರಲ್ಲಿ 17719 ಹಾಗೂ 2021&22ನೇ ಸಾಲಿನಲ್ಲಿ 31500 ಟನ್ ಮೀನು ಉತ್ಪಾದನೆ ಮಾಡಲಾಗಿದೆ. ರಾಜ್ಯದ ಮೀನು ಉತ್ಪಾದನೆಯಲ್ಲಿ ಜಿಲ್ಲೆಯು 7 ಸ್ಥಾನ ಪಡೆದುಕೊಂಡಿದೆ.
ಮೀನುಮರಿಗೂ ಹೆಚ್ಚಿದ ಬೇಡಿಕೆ: ಮೀನು ಉತ್ಪಾದನೆಗೆ ಅತ್ಯಗತ್ಯವಾದ ಗುಣಮಟ್ಟದ 5 ಕೋಟಿ ಬಿತ್ತನೆ ಮೀನು ಮರಿಗಳ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಮೀನುಗಳು ಮಾಕೋರ್ನಹಳ್ಳಿ ಮೀನು ಮರಿ ಉತ್ಪಾದನಾ ಕೇಂದ್ರ ಹಾಗೂ 7 ತಾಲೂಕುಗಳಲ್ಲಿ ಮೀನುಮರಿ ಪಾಲನಾ ನರ್ಸರಿಗಳಿದ್ದರೂ ಮೀನುಮರಿ ಉತ್ಪಾದನೆ ಮಾಡಿದ ಉದಾಹರಣೆ ಇಲ್ಲ. ವಾರ್ಷಿಕ 2.5 ಕೋಟಿ ಬಿತ್ತನೆ ಮೀನುಮರಿಗಳನ್ನು ಉತ್ಪಾದಿಸುವ ಗುರಿಯಿದ್ದರೂ ಪ್ರಸಕ್ತ ಸಾಲಿನಲ್ಲಿ ಸುಮಾರು 8 ಕೆರೆಗಳಲ್ಲಿ ಮೀನುಮರಿ ಪಾಲನೆ ಮಾಡಿ 75 ಲಕ್ಷಗಳಿಗೂ ಅಧಿಕ ಬಲಿತ ಬಿತ್ತನೆ ಮರಿ ಉತ್ಪಾದನೆ ಮಾಡಲಾಗಿದೆ.
ಮೀನುಗಾರಿಕೆ ಗುತ್ತಿಗೆಯಲ್ಲಿ ಗೋಲ್ಮಾಲ್?: ಒಳನಾಡು ಮೀನುಗಾರಿಕೆ ಕಾರ್ಯನೀತಿ ಅನ್ವಯ ಕೆರೆಗಳ ವಿಲೇವಾರಿ ನಡೆಯುತ್ತಿದೆ. 30 ಕೆರೆ ಸ್ಥಳಿಯ ಮೀನುಗಾರರ ಸಹಕಾರ ಸಂಗಳಿಗೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ 170ಕ್ಕೂ ಅಧಿಕ ಕೆರೆಗಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುತ್ತಿದ್ದರೂ ಆದಾಯ ಹೆಚ್ಚಾಗದಿರುವುದು ಅಚ್ಚರಿ ಮೂಡಿಸಿದೆ.
ಗ್ರಾಮಗಳಲ್ಲಿ ಕೆರೆಗಳನ್ನು ಕಡಿಮೆ ಬೆಲೆಗೆ ಹರಾಜು ಕೂಗಿಕೊಂಡು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದ್ದರೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೌನವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ವಾರ್ಷಿಕ 1 ರಿಂದ 1.50 ಕೋಟಿ ರೂ. ಮಾತ್ರ ಆದಾಯ ಬರುತ್ತಿದ್ದು ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಶ್ರಮಿಸಬೇಕಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೀನು ಕೃಷಿ ಕೈಗೊಳ್ಳಲು ಬಯಸುವವರು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿಯಿರುವ ಮೀನುಗಾರಿಕೆ ಉಪನಿರ್ದೇಶಕರ ಕಚೇರಿ ದೂ.0816 2278126 ಅಥವಾ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು. ಮೀನುಗಾರರ ಕುಂದು&ಕೊರತೆ ನಿವಾರಣೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿ ನೀಡಲು ಸ್ಥಾಪಿಸಿರುವ ಸಹಾಯವಾಣಿ 8277200300 ಕೂಡ ಸಂಪರ್ಕಿಸಬಹುದು.
ಮೀನು ನಿಸರ್ಗದತ್ತ ಉತಷ್ಟ ಆಹಾರವಾಗಿದ್ದು, ಇದರ ಲಭ್ಯತೆ ಮತ್ತು ಬಳಕೆ ಹೆಚ್ಚಿಸಲು ಇಲಾಖೆ ವತಿಯಿಂದ ಒದಗಿಸುವ ಸೌಲಭ್ಯಗಳನ್ನು ರೈತರು ಪಡೆದು ಸ್ವಾವಲಂಬಿಗಳಾಗಬೇಕು. > ಟಿ.ಎಸ್.ವಿಶ್ವನಾಥ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ