ದೋರನಹಳ್ಳಿ:ನಿತ್ಯ ಸಂಧ್ಯಾವಂದನೆ ಮಾಡಿದರೆ ಮೈ-ಮನಸ್ಸು ಜತೆಗೆ ಆತ್ಮ ಶುದ್ಧಿಯೂ ಆಗುತ್ತದೆ ಎಂದು ಮೌನೇಶ ಆಚಾರ್ಯ ಹೇಳಿದರು.
ಗ್ರಾಮದ ಆದಿ ಸಂಗಮೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸ ನಿಮಿತ್ತ ವಿಶ್ವಕರ್ಮ ಸಮಾಜದವರಿಗೆ ಹಮ್ಮಿಕೊಂಡ ಸಂಧ್ಯಾವಂದನೆ ಕಾರ್ಯಕ್ರಮದಲ್ಲಿ ಉಪದೇಶ ನೀಡಿದ ಅವರು, ಸಂಧ್ಯಾವಂದನೆ ಈ ಭರತ ಭೂಮಿಯ ಸಂಸ್ಕೃತಿ, ಆಚಾರ, ವಿಚಾರವಾಗಿದೆ. ಸಂಕಲ್ಪ, ಪ್ರಾಣವಾಯು, ಗಾಯತ್ರಿ ಮಂತ್ರ, ತುಳಸಿ ಮಂತ್ರವನ್ನು ಬೆಳಗ್ಗಿನ ಜಾವ ಸ್ನಾನದ ನಂತರ ಪಠಿಸುವ ಮೂಲಕ ದೇವತಾರಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ವಿಶ್ವಕರ್ಮ ಸಮಾಜದ ಮನೋಹರ ಪತ್ತಾರ, ಚಂದ್ರಶೇಖರ ಪತ್ತಾರ, ಮಲಕಪ್ಪ ಕಂಚಗಾರ, ಕಾಳಪ್ಪ ಕಂಚಗಾರ, ಮಹೇಶ ಕಂಚಗಾರ, ಪ್ರಶಾಂತ ಪತ್ತಾರ, ಮಂಜುನಾಥ ಕಂಚಗಾರ, ಬಸವರಾಜ ಚಿಕ್ಕಬೂದುರು, ರುಕ್ಮಾವತಿ, ಅಕ್ಕಮ್ಮ, ರತ್ನಮ್ಮ, ಗೀತಾ, ಸಾವಿತ್ರಿ, ಲತಾ, ಮಹಾನಂದ ಇತರರಿದ್ದರು.