ಜಿಲ್ಲೆ

ನಿತ್ಯ ಯೋಗಭ್ಯಾಸದಿಂದ ಉತ್ತಮ ಆರೋಗ್ಯ

ಚಿತ್ರದುರ್ಗ: ನಿತ್ಯ ಯೋಗ್ಯಾಭ್ಯಾಸದಿಂದ ರೋಗಗಳನ್ನು ದೂರವಿಡಬಹುದು ಎಂದು ಬಸವೇಶ್ವರ ಆಸ್ಪತ್ರೆ ವ್ಯವಸ್ಥಾಪಕ ಸತ್ಯನಾರಾಯಣ ಹೇಳಿದರು.
ನಗರದ ಜಿಸಿಬಿ ಬಸಣ್ಣ ನರ್ಸರಿಯಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರದುರ್ಗದ ಐಯುಡಿಪಿ ಬಡಾವಣೆಯ ನಿಸರ್ಗ ಯೋಗ, ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ನಿರಂತರ ವ್ಯಾಯಾಮ, ಯೋಗಾಭ್ಯಾಸ, ವಾಕಿಂಗ್, ಆಹಾರ ಸೇವನೆಯಲ್ಲಿ ನಿಯಮಗಳನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಯೋಗ ಗುರು ಶಿವಲಿಂಗಪ್ಪ ಮಾತನಾಡಿ, ಸತತ ಹತ್ತು ವರ್ಷಗಳ ಪರಿಶ್ರಮದಿಂದ ಯೋಗ ಕೇಂದ್ರವಿಂದು ಹೆಮ್ಮರವಾಗಿ ಬೆಳೆದಿದೆ. ಪತಂಜಲಿ ಯೋಗ ಸಂಸ್ಥೆ ಮಾಜಿ ಜಿಲ್ಲಾಧ್ಯಕ್ಷ ದಿ. ಮಲ್ಲಿಕಾರ್ಜುನಪ್ಪ ಅವರ ಸ್ಫೂರ್ತಿ, ಪ್ರೋತ್ಸಾಹ ಇದಕ್ಕೆ ಕಾರಣ ಎಂದರು.
ಯೋಗ ಕೇಂದ್ರದ ಅಧ್ಯಕ್ಷ ರಾಮಪ್ಪ ಮಾತನಾಡಿದರು. ಸತ್ಯನಾರಾಯಣ, ಶಿವಲಿಂಗಪ್ಪ, ರಾಮಪ್ಪ, ಯೋಗಪಟು ರವಿಶಂಕರ್ ಅವರನ್ನು ಗೌರವಿಸಲಾಯಿತು. ಸತ್ಯನಾರಾಯಣ ಅವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಿಸರ್ಗಯೋಗ, ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್. ಸಿದ್ದರಾಜು ಸ್ವಾಗತಿಸಿ, ಜಯಣ್ಣ ವಂದಿಸಿದರು. ಶಬರಿ ಪ್ರಾರ್ಥಿಸಿದರು. ಮಹಾಲಿಂಗಪ್ಪ ನಿರೂಪಿಸಿದರು. ಚಿದಾನಂದಮೂರ್ತಿ, ನಳಿನಾ, ಹನುಮಂತ ಪ್ಪ, ಗೀತಮ್ಮ, ಪುಷ್ಪವತಿ, ಕೌಸಲ್ಯಾ, ಸಂಯುಕ್ತ, ದಿವ್ಯಾ, ಮಧುಸೂದನ್, ಅಣ್ಣೇಶ್ ಇತರರು ಇದ್ದರು.