ಗಂದಿಗವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇಟಗಿ ಕೇಂದ್ರ ಮಟ್ಟದ ಕ್ರೀಡಾಕೂಟದ ಜ್ಯೋತಿಯನ್ನು ಗಣ್ಯರು ಬರಮಾಡಿಕೊಂಡರು. ದೇಸಾಯಿ ಗಾಳಿ, ಮಂಜುನಾಥ ಪೂಜಾರ, ಸದ್ದಾಂ ಬಾಗವಾನ್, ಐ.ಜೆ.ಬಾಗವನ, ವಿ.ಎಸ್.ಚರಂತಿಮಠ ಇದ್ದರು. 
ಜಿಲ್ಲೆ

ನಿತ್ಯ ಜೀವನದಲ್ಲಿ ಶಿಸ್ತಿರಲಿ

ಇಟಗಿ: ವಿದ್ಯಾರ್ಥಿಗಳು ಟಿವಿ ಮತ್ತು ಮೊಬೈಲ್‌ನಿಂದ ದೂರವಿದ್ದು, ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಗಂದಿಗವಾಡ ಗ್ರಾಪಂ ಅಧ್ಯಕ್ಷ ದೇಸಾಯಿ ಗಾಳಿ ಹೇಳಿದರು. ಸಮೀಪದ ಗಂದಿಗವಾಡ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇಟಗಿ ಕೇಂದ್ರ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ನಿತ್ಯ ಜೀವನದಲ್ಲಿ ಶಿಸ್ತು, ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. ಸಿ.ಆರ್.ಪಿ ಮಂಜುನಾಥ ಪೂಜಾರ ಮಾತನಾಡಿ, ಶೈಕ್ಷಣಿಕ ಕಾರ್ಯ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಕ್ರೀಡೆಗಳ ಪಾತ್ರ ಮುಖ್ಯ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಸದ್ದಾಂ ಬಾಗವಾನ್, ಮುಖ್ಯಶಿಕ್ಷಕ ಐ.ಜೆ.ಬಾಗವನ, ವಿ.ಎಸ್.ಚರಂತಿಮಠ, ಸುರೇಶ ಕಮ್ಮಾರ, ಎನ್.ಸಿ.ಬಾಗವಾನ್ ಇತರರಿದ್ದರು.