ಪಂಚನಹಳ್ಳಿ: ನಿಡುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜಾನಾಯ್ಕ ಮತ್ತು ಉಪಾಧ್ಯಕ್ಷರಾಗಿ ಸುಜಾತಾಬಾಯಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಾಪಂ ಇಒ ಸಿ.ಆರ್.ಪ್ರವೀಣ್ ಕಾರ್ಯನಿರ್ವಹಿಸಿದರು. ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್, ಪಂಚನಹಳ್ಳಿ ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ಮುಖಂಡರಾದ ಜಿ.ಶಿವರಾಜ್, ಪಿ.ಎಸ್.ರೇಣುಕಮೂರ್ತಿ, ಪಿ.ಎನ್.ಅಭಿಷೇಕ್, ನಾರಣಾಪುರ ಅಶೋಕ್, ಸದಸ್ಯರಾದ ಎನ್.ಸಿ.ಕಾಂತರಾಜ್, ನೇತ್ರಾವತಿ, ರಾಮಕ್ಕ ಮತ್ತಿತರರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು. ಪಿಡಿಒ ಎಂ.ಆರ್.ಸತೀಶ್ ಮತ್ತು ಸಿಬ್ಬಂದಿ ಇದ್ದರು.