oppo_2 
ಜಿಲ್ಲೆ

ನಿಡಘಟ್ಟ ಮಾರಮ್ಮ ದೇಗುಲದ ಗುಡ್ಡಪ್ಪ ಆಯ್ಕೆ

ಮದ್ದೂರು: ತಾಲೂಕಿನ ನಿಡಘಟ್ಟ ಗ್ರಾಮದ ಮಾರಮ್ಮನ ದೇಗುಲದ ಗುಡ್ಡಪ್ಪ ಅವರನ್ನು ಚಿಕ್ಕರಸಿನಕೆರೆ ಬಸವಪ್ಪ ಮಂಗಳವಾರ ಆಯ್ಕೆ ಮಾಡಿತು.

ಹಿಂದಿನ ಗುಡ್ಡಪ್ಪ ಕಾಂತ ಅವರು ಮಾ.18 ಮತ್ತು 19ರಂದು ನಡೆಯುವ ಮಾರಮ್ಮನ ಹಬ್ಬಕ್ಕೆ ಕೊಂಡ ಹಾಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಿಕ್ಕರಸಿನಕೆರೆ ಬಸವಪ್ಪ ಚೇತನ್ (ಪುಟ್ಟ) ಅವರನ್ನು ಹೊಸದಾಗಿ ಗುಡ್ಡಪ್ಪ ಎಂದು ತೀರ್ಮಾನ ಮಾಡಿತು. ಇದಕ್ಕೆ ಸ್ಥಳದಲ್ಲಿದ್ದ ಭಕ್ತರು ಒಪ್ಪಿಗೆ ಸೂಚಿಸಿದರು.

ಮಾರಮ್ಮನ ಗುಡ್ಡಪ್ಪ ಆಗಲು ಒಟ್ಟು 8 ಜನ ಅಕಾಂಕ್ಷಿತರು ಇದ್ದರು. ಇದರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆಯ್ಕೆ ಮಾಡಲು ಗ್ರಾಮದ ಶನೈಶ್ಚರ ಸ್ವಾಮಿಗೆ ದೇಗುಲದ ಬಳಿ ಆಗಮಿಸಿ ಬಸವನಪ್ಪನಿಗೆ ವಿಶೇಷ ಪೂಜೆ ಮಾಡಲಾಯಿತು. ನಂತರ 8 ಜನರಲ್ಲಿ ಚೇತನ್ ಅವರನ್ನು ಗುಡ್ಡಪ್ಪ ಎಂದು ಕೊಂಬಿನಲ್ಲಿ ತಿವಿಯುವ ಮೂಲಕ ಆಯ್ಕೆ ಮಾಡಿತು. ಬಳಿಕ ತಮಟೆ, ನಗಾರಿಗಳ ಮೂಲಕ ಮೆರವಣಿಗೆ ಮೂಲಕ ಕರಗದ ಗುಡ್ಡಪ್ಪ, ಧೂಪದ ಗುಡ್ಡಪ್ಪ ಸೇರಿದಂತೆ ಹಲವು ಭಕ್ತರು ಆಂಜನೇಯಸ್ವಾಮಿ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ತರುವಾಯ ಮಾರಮ್ಮನ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಲಾಯಿತು.

ನಾರಾಯಣಸ್ವಾಮಿ, ಪ್ರಕಾಶ್, ಎನ್.ಎಸ್.ಬಾಲಾಜಿ, ಕರಗದ ಗುಡ್ಡಪ್ಪ ಶ್ರೀನಿವಾಸ್, ಧೂಪದ ಗುಡ್ಡಪ್ಪ ಸಂಜೀವ, ಶ್ರೀನಿವಾಸ, ರಾಜಣ್ಣ, ಪೊಲೀಸ್ ಯೋಗಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಖಂಡರಾದ ಶ್ರೀನಿವಾಸ್, ರಘು, ರವಿ, ಸತೀಶ್, ಚಿಕ್ಕಪುಟ್ಟೇಗೌಡ ಇತರರು ಇದ್ದರು.