ಹಲಗೂರು: ಸಮೀಪದ ನಿಟ್ಟೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಪ್ರಮೀಳಾ ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಸೋಮಶೇಖರ್ ಆಯ್ಕೆಯಾದರು.
ಒಟ್ಟು 13 ಸದಸ್ಯರ ಬಲ ಹೊಂದಿರುವ ಗ್ರಾಮಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ 2ನೇ ಅವಧಿಗೆ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಮಹಾದೇವಸ್ವಾಮಿ, ಶಿವಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್, ಲಕ್ಷ್ಮಿಅವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಪ್ರಮೀಳಾ ಮಹಾದೇವಸ್ವಾಮಿ, ಸೋಮಶೇಖರ್ ತಲಾ ಏಳು ಮತ ಪಡೆದ ಜಯ ಗಳಿಸಿದರು. ಶಿವಮ್ಮ ಹಾಗೂ ಲಕ್ಷ್ಮಿಅವರು ತಲಾ ಆರು ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸ್ವಾಮಿವಿವೇಕಾನಂದ ಕಾರ್ಯ ನಿರ್ವಹಿಸಿದರು.
ಸದಸ್ಯರಾದ ಉಮಾ, ಅನಿತಾ, ನಾಗರತ್ನಾ, ಮರಿಸ್ವಾಮಿ, ಕೆಂಚಯ್ಯ, ಪುಟ್ಟಸ್ವಾಮಿ, ದಿವ್ಯಾ ಕುಮಾರ್, ಮಹದೇವಿ, ಮಹದೇವ ತಾ.ಪಂ. ವ್ಯವಸ್ಥಾಪಕ ಮುನೇಂದ್ರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಟೇಶ್ ಸಿಬ್ಬಂದಿ ಬಾಲು ಇತರರು ಇದ್ದರು.