ಜಿಲ್ಲೆ

ನಿಜಲಿಂಗಪ್ಪ ನಿವಾಸ ನೋಂದಣಿಗಾಗಿ ಪತ್ರ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಬೆಂಗಳೂರಲ್ಲಿ ಗುರುವಾರ ನಡೆದ ಉನ್ನತಮಟ್ಟದ ಸಭೆ ನಿರ್ದೇಶನದಂತೆ, ಚಿತ್ರದುರ್ಗದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ನಿವಾಸ ಖರೀದಿಗೆ ಸಂಬಂಧಿಸಿ, ಜಿಲ್ಲಾಡಳಿತದಿಂದ ಮನೆ ವಾರಸುದಾರ ಎಸ್.ಕೆ. ವಿನಯ್ ಅವರಿಗೆ ಶುಕ್ರವಾರ ಪತ್ರ ಬರೆಯಲಾಗಿದೆ.

ಕಾನೂನು ಸಲಹೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ನಡೆದ ಸಭೆ ನಿರ್ದೇಶನದಂತೆ ಸರ್ಕಾರ ನಿವಾಸವನ್ನು ಖರೀದಿಸಿ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಲು ಸಿದ್ಧವಿದೆ. ಆದ್ದರಿಂದ ಅಗತ್ಯ ದಾಖಲೆಗಳೊಂದಿಗೆ ನೋಂದಣಿಗಾಗಿ ದುರ್ಗಕ್ಕೆ ಎಂದು ತಾವು ಬರಬಹುದು ಎಂಬುದನ್ನು ತಿಳಿಸುವಂತೆ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್‌ಗೆ ಪತ್ರ ಬರೆಯಲಾಗಿದೆ ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದ್ದಾರೆ.