ಕಲಬುರಗಿ: ಪ್ರತಿ ಟನ್‌ಗೆ ಸರ್ಕಾರ ನಿಗದಿಪಡಿಸಿದ ಮೊತ್ತ ಪಡೆದು ಟಿಪ್ಪರ್‌ಗಳಿಗೆ ಮರಳು ತುಂಬಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ಜಿಲ್ಲಾ ಟಿಪ್ಪರ್ ಮಾಲೀಕರ ಅಭಿವೃದ್ಧಿ ಸಂಘದ ಕಾರ್ಯಕರ್ತರು ಡಿಸಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು. ಆನಂದ ರಾಧೆ, ಕಿರಣ ರಾಠೋಡ್, ವಿಠ್ಠಲ್, ಅಬ್ದುಲ್, ಶಿವು, ಇಕ್ಬಾಲ್ ಪಟೇಲ್, ಮಾಣಿಕ್ ಪಾಟೀಲ್ ಇತರರಿದ್ದರು.