ಜಿಲ್ಲೆ

ನಿಂಬೆಹಣ್ಣು ಸಾಗಾಟದ ವಾಹನದಲ್ಲಿ 40 ಕೆಜಿ ಗಾಂಜಾ ಪತ್ತೆ, ಇಬ್ಬರ ಬಂಧನ

reportermng

ಮಂಗಳೂರು: ನಿಂಬೆಹಣ್ಣು ತುಂಬಿದ ಚೀಲಗಳ ನಡುವೆ ವಾಹನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 40 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಶಿಹಾಬುದ್ದೀನ್ ಹಾಗೂ ಲತೀಫ್ ಬಂಧಿತರು. ನಗರದ ಕೊಟ್ಟಾರಚೌಕಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಬೊಲೆರೊ ವಾಹನ ಸಮೇತ ಒಟ್ಟು 11.17 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.