ನಿಂಬರ್ಗಾ ಗ್ರಾಪಂ ವಿಸರ್ಜನೆ ಮಾಡಬೇಕು, ಜನತೆಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ವ ಸಮಾಜ ಕಲ್ಯಾಣ ಸಮಿತಿಯಿಂದ ನಿಂಬರ್ಗಾ ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ವಿಠ್ಠಲ ಕೋಣೆಕರ್, ಸೂರ್ಯಕಾಂತ ಕಂಟೆಕೂರ, ಚಂದ್ರಕಾAತ ದುಗೊಂಡ ಇತರರಿದ್ದರು. 
ಜಿಲ್ಲೆ

ನಿಂಬರ್ಗಾ ಗ್ರಾಪಂ ವಿಸರ್ಜನೆ ಮಾಡಿ

ನಿಂಬರ್ಗಾ: ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯ ಭ್ರಷ್ಟಾಚಾರ ನಡೆದಿದ್ದು, ಎಲ್ಲ ಸದಸ್ಯರು ಪಾಲುದಾರರಾಗಿದ್ದಾರೆ. ಹೀಗಾಗಿ ಕೂಡಲೇ ಪಂಚಾಯಿತಿಯನ್ನು ವಿಸರ್ಜನೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಸರ್ವ ಸಮಾಜ ಕಲ್ಯಾಣ ಸಮಿತಿಯಿಂದ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಮಿತಿ ಅಧ್ಯಕ್ಷ ವಿಠ್ಠಲ್ ಕೋಣೆಕರ್ ಮಾತನಾಡಿ, 15ನೇ ಹಣಕಾಸು ಯೋಜನೆಯ ಹಣ ಗುಳುಂ ಮಾಡಲಾಗಿದೆ. ಸುಮಾರು 9 ಸದಸ್ಯರಿಗೆ ಕಾನೂನು ಬಾಹಿರವಾಗಿ ಚೆಕ್ ನೀಡಲಾಗಿದೆ. ಇಡೀ ಪಂಚಾಯಿತಿಯೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ದೂರಿದರು.

ದಾನೇಶ್ವರ ನಗರದಲ್ಲಿ ಕುಡಿಯಲು ನೀರಿಲ್ಲ, ಸೂಕ್ತ ಸಿಸಿ ರಸ್ತೆ ನಿರ್ಮಿಸಿಲ್ಲ. ಮೌಲಾ ನಗರದಲ್ಲೂ ಸಮಸ್ಯೆ ತಾಂಡವವಾಡುತ್ತಿದೆ. ಹೀಗಿದ್ದರೂ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಪಂಚಾಯಿತಿಯಲ್ಲಿನ ಸುಮಾರು 27 ಲಕ್ಷ ರೂ. ಗುಳುಂ ಮಾಡಲಾಗಿದ್ದು, ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನುನೂ ಕ್ರಮ ಜರುಗಿಸಬೇಕು. 2021-24ನೇ ಸಾಲಿನವರೆಗಿನ 15ನೇ ಹಣಕಾಸು ಯೋಜನೆಯ ಅನುದಾನದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಉಪ ತಹಸೀಲ್ದಾರ್ ಮಹೇಶ ಡಿ., ಸಣ್ಣ ನೀರಾವರಿ ಇಲಾಖೆ ಜೆಇ ಅನೀಲ್, ಪಿಡಿಒ ಸುಕನ್ಯಾ ಜತೆಗಿದ್ದರು.

ಪ್ರಮುಖರಾದ ಚಂದ್ರಕಾAತ ದುಗೊಂಡ, ಪರಮೇಶ್ವರ ಶಿವಗೊಂಡಗೋಳ, ಪ್ರಕಾಶ ಸರ್ವೋದಯ, ಸೂರ್ಯಕಾಂತ ಕರಣಕರ್, ರಾಮು ದೇವಕರ್, ವಿಠ್ಠಲ್ ಕಟ್ಟಿಮನಿ, ಮಹೇದ್ರ ನಿರ್ಮಲಕರ್, ಕಲಾವತಿ ಮಂಟಗಿ, ಖಾದರ್‌ಸಾಬ್ ಲದಾಫ್, ಮಲ್ಲಮ್ಮ ಹೇಬಳಿ, ದೂಳಮ್ಮ, ಶಿವಲೀಲಾ ಮಠಪತಿ, ಭಾಗಮ್ಮ ಹಿರೇಮಠ, ಸರಸ್ವತಿ ಮಡಿವಾಳ, ಈರಮ್ಮ ದೂಗೊಂಡ, ಧರ್ಮರಾಯ ಕಾಮಣಗೊಳ, ಜಗ್ಗು ಮಾಳಗಿ, ಲಕ್ಷ್ಮೀಕಾಂತ ಕಾಮಣಗೋಳ, ಶಿವುಕುಮಾರ ನಾಗೂರ, ವೆಂಕಟೇಶ ಭೋವಿ, ಶರಣು ಬಿರಾದಾರ, ಚಂದ್ರಕಾAತ ಬಿಲಗುಂದಿ, ಮಲ್ಲಕಣ್ಣ ಸಿಂಗೆ, ಬಸವರಾಜ ಟಪ್ಪಾ, ವಿಠ್ಠಲ್ ಜಮಾದಾರ, ಮರೆಪ್ಪ ಹಾದಿಮನಿ, ಇಮಾಮಸಾಬ್ ಪಟೇಲ್, ರಾಜು ಬಮ್ಮನಹಳ್ಳಿ, ರುತ್ತೇಶ ನಿರ್ಮಲಕರ್ ಇತರರಿದ್ದರು.