ಜಿಲ್ಲೆ

ನಾವ್ಯಾರೂ ದೇಶಕ್ಕಿಂತ ದೊಡ್ಡವರಲ್ಲ

ತುಮಕೂರು ಡೆಸ್ಕ್

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಸೋಮಣ್ಣ ಆಕ್ರೋಶ

ತುಮಕೂರು: ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡನೀಯ, ಅನುಭವಿ ರಾಜಕಾರಣಿಯಾದವರು ಪರಿಸ್ಥಿತಿ ಅರ್ಥೈಸಿಕೊಂಡು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ನಗರದ ಸಂಸದರ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಇದ್ದರೆ ನಾವು, ನಾವ್ಯಾರೂ ದೇಶಕ್ಕಿಂತ ದೊಡ್ಡವರಲ್ಲ. ಉಗ್ರರ ದಾಳಿ ನಡೆದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಯಾವ ರೀತಿ ಮಾತನಾಡಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಅನವಶ್ಯಕವಾಗಿ ಭಾರತ ಮಾತೆಗೆ ಅಪಚಾರ ಮಾಡುವ ರೀತಿ ಮಾತನಾಡುವುದನ್ನು ಯಾರೂ ಸಹಿಸುವುದಿಲ್ಲ ಎಂದರು. ಸಿದ್ದರಾಮಯ್ಯ ಸಿದ್ದರಾಮಯ್ಯನವರಾಗಿದ್ದರೇ ಒಳ್ಳೆಯದು. ಅವರು, ಸಿದ್ದರಾಮಯ್ಯನವರಾಗದೇ ಬೇರೊಂದು ಸಮುದಾಯದ ಓಲೈಕೆಯಲ್ಲೇ ಮಾತನಾಡಿದರೆ ಅದು ಅವರಿಗೆ ಶೋಭೆ ತರುವುದಿಲ್ಲ. ದೇಶದ ಅಭದ್ರತೆಗೆ ಕಾರಣವಾಗುವ ಈ ರೀತಿಯ ಹೇಳಿಕೆಗಳನ್ನು ಅವರು ಕೊಡಬಾರದು ಎಂದು ಅವರು ಹೇಳಿದರು.

ಪಹಲ್ಗಾಮ್​ನಲ್ಲಿ ಉಗ್ರರು ಪ್ರವಾಸಿಗರನ್ನು ಧರ್ಮ ಕೇಳಿ ಕೊಲೆ ಮಾಡುತ್ತಾರೆ ಎಂದರೆ ಏನರ್ಥ. ಉಗ್ರರ ದಾಳಿ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಕೊಂಚ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಅವಶ್ಯಕತೆ ಇಲ್ಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕ್ಷುಲ್ಲಕ ಭಾಷೆ ಬಳಕೆ ಮಾಡಿ ಜನರಲ್ಲಿ ಕ್ರೋಧ ಉಂಟು ಮಾಡಬಾರದು ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಶ್ಮೀರದ ಮೇಲಿದ್ದ 370ನೇ ವಿಧಿಯನ್ನು ತೆಗೆದ ಮೇಲೆ ಪ್ರವಾಸೋದ್ಯಮದಿಂದ 9-10 ಸಾವಿರ ಕೋಟಿ ಬಂದಿದೆ. ಅದನ್ನೆಲ್ಲಾ ಕಾಶ್ಮೀರದ ಅಭಿವೃದ್ಧಿಗೆ ಬಳಕೆ ಮಾಡಿದ್ದಾರೆ. ಅಲ್ಲಿನ ಜನ ಖುಷಿಯಾಗಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಪಾಕ್​ ಪ್ರಜೆಗಳು ದೇಶ ತೊರೆಯುವಂತೆ ಆದೇಶಿಸಿದೆ. ಈ ದೇಶವನ್ನು ರಾಜ್ಯ ಸರ್ಕಾರಗಳು ಪಾಲನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ಗೃಹ ಸಚಿವರು ಕಾಯೊರ್ನ್ಮುಖರಾಗಿದ್ದಾರೆ ಎಂದರು. ಏ.30ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವಣ್ಣನ ಅನುಯಾಯಿಗಳು ಭಾಗಹಿಸಬೇಕು ಎಂದು ಮನವಿ ಮಾಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್​, ಮಾಜಿ ಸಂಸದ ಜಿ.ಎಸ್​.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್​ ಹೆಬ್ಬಾಕ ಇದ್ದರು.

ಭಯೋತ್ಪಾದಕರ ಕೃತ್ಯ ಖಂಡಿಸುತ್ತಿದೆ ಜಗತ್ತು

ತುಮಕೂರು: ದೇಶದ ಸ್ಥಿರತೆ, ಅಭ್ಯುದಯ, ಒಗ್ಗಟ್ಟಿಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಬದ್ಧರಾಗಿದ್ದಾರೆ. ಕಾಶ್ಮೀರ ಹತ್ಯೆ ಪ್ರಕರಣದಲ್ಲಿ ತಪು$್ಪ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಎಂಬುದರ ತೀಮಾರ್ನ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಸಂಸದರ ಕಚೇರಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಪ್ರಧಾನಿ ನರೇಂದ್ರಮೋದಿ ಮನ್​ಕಿ ಬಾತ್​ ವೀಕ್ಷಣೆ ಮಾಡಿದ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರ ಕೃತ್ಯವನ್ನು ಜಗತ್ತೇ ಖಂಡಿಸುತ್ತಿದೆ ಎಂದರು. ಮೋದಿ ಅವರು ಪ್ರಧಾನಿಯಾದ ಮೇಲೆ ಕಾಶ್ಮೀರದ ಮೇಲಿನ 370ನೇ ವಿಧಿ ತೆಗೆದ ಮೇಲೆ ಅಲ್ಲಿನ ಜನಜೀವನ ಸಹಜವಾಗಿತ್ತು. ಪ್ರವಾಸೋದ್ಯಮ ವೃದ್ಧಿಯಾಗಿತ್ತು. ಪ್ರವಾಸೋದ್ಯಮದಿಂದ ಆ ರಾಜ್ಯಕ್ಕೆ 8 ಸಾವಿರ ಕೋಟಿ ರೂ. ಆದಾಯ ಬಂದಿತ್ತು. ನಮ್ಮ ಸರ್ಕಾರ ಜಮ್ಮು-&ಕಾಶ್ಮೀರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದರು. ಸ್ವಾತಂತ್ರ$್ಯ ಬಂದು ಇಷ್ಟು ವರ್ಷಗಳಾದರೂ ಅನೇಕ ಹಳ್ಳಿಗಳಲ್ಲಿ ಪ್ರೋರೈಡ್​ಯುಕ್ತ ನೀರು ಕುಡಿಯುವ ಪರಿಸ್ಥಿತಿ ಇದೇ. ಜಿಲ ಜೀವನ್​ ಯೋಜನಡೆಯಡಿ ದೇದ ಯಾವ ಹಳ್ಳಿಯನ್ನೂ ಬಿಡದೆ ಎಲ್ಲ ಊರಿನ ಜನರಿಗೂ ವಿವಿಧ ಹಂತಗಳಲ್ಲಿ ಶುದ್ಧ ಕುಡಿಯುವ ನೀರು

ಪೂರೈಕೆ ಮಾಡಲು ಮಾಸ್ಟರ್​ ಪ್ಲಾನ್​ ರೂಪಿಸಲಾಗುವುದು ಎಂದರು.