ಹುಬ್ಬಳ್ಳಿ: ‘ಯೂಕ್ರೇನ್ನ ರ್ಖಾವ್ನಲ್ಲಿ ರಂಜಿತಾ ಕಲಕಟ್ಟಿ, ನಾನು ಒಂದೇ ಪ್ಲಾಟ್ನಲ್ಲಿ ವಾಸವಾಗಿದ್ದೆವು. ಯುದ್ಧ ಆರಂಭವಾದ ಬಳಿಕ ತುಂಬ ಭಯಾನಕ ಸ್ಥತಿ ನಿರ್ವಣವಾಗಿತ್ತು. ನಾವು ಬದುಕಿ ಬಂದಿದ್ದೇ ದೊಡ್ಡ ಪವಾಡ’.
ಇದು ಯೂಕ್ರೇನ್ನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಾವೇರಿ ಜಿಲ್ಲೆ ಹಾನಗಲ್ನ ಶಿವಾನಿ ಮಡಿವಾಳರ ಮಾತು. ‘ರಾಣೆಬೆನ್ನೂರಿನ ನವೀನ ನನ್ನ ಸಹಪಾಠಿ. ಆತನ ಸಾವು ಆಘಾತ ತಂದಿದೆ. ನಾನು ರ್ಖಾವ್ ವಿವಿಯಲ್ಲಿ ನಾಲ್ಕನೇ ವರ್ಷದಲ್ಲಿ ಎಂಬಿಬಿಎಸ್ ಓದುತ್ತಿದ್ದೇನೆ. ಯುದ್ಧ ಸಂದರ್ಭದಲ್ಲಿ ಬಾಂಬ್ ಬಿದ್ದಾಗ ಭೂಮಿ ಕಂಪಿಸುತ್ತಿತ್ತು. ಒಂದು ವಾರ ಬಂಕರ್ನಲ್ಲಿ ಉಳಿದುಕೊಂಡಿದ್ದೆವು. ಸರಿಯಾಗಿ ಊಟ, ನೀರು ಸಿಗಲಿಲ್ಲ’ ಎಂದರು.
‘ಯೂನಿವರ್ಸಿಟಿಯವರು ಸರಿಯಾದ ಮಾಹಿತಿ ನೀಡಲಿಲ್ಲ. ಆನ್ಲೈನ್ ಕ್ಲಾಸ್ ಮಾಡುವ ಮಾತನ್ನೂ ಹೇಳಲಿಲ್ಲ. ನಿಮ್ಮ ರಿಸ್ಕ್ ಮೇಲೆ ನಿಮ್ಮ ದೇಶಕ್ಕೆ ಹೋಗಬೇಕು ಎಂದರು. ಹಾಗಾಗಿ, ನಾವು ಗೊಂದಲದಲ್ಲಿದ್ದೆವು. ಭಾರತ ಸರ್ಕಾರದಿಂದ 5 ದಿನದ ಮೊದಲು ಮಾಹಿತಿ ಬಂದಿತ್ತು. ಆದರೆ, ಏರ್ ಟಿಕೆಟ್ ಹೆಚ್ಚಾಗಿದ್ದರಿಂದ ಬರಲಾಗಲಿಲ್ಲ’ ಎಂದು ವಿವರಸಿದರು.
ಮೀಸಲಾತಿಯಿಂದ ಸೀಟು ಸಿಗಲಿಲ್ಲ
ನಮ್ಮ ದೇಶಕ್ಕಿಂತ ಯೂಕ್ರೇನ್ನಲ್ಲಿ ಶಿಕ್ಷಣಕ್ಕೆ ಕಡಿಮೆ ಖರ್ಚಾಗುತ್ತದೆ. ಹಾಗಾಗಿ, ನಾವು ಅಲ್ಲಿಗೆ ಹೋಗಿದ್ದೇವೆ. ನಮ್ಮಲ್ಲಿ ಇರುವ ಮೀಸಲಾತಿ ವ್ಯವಸ್ಥೆಯಿಂದ ಸೀಟು ವಂಚಿತರಾಗಿದ್ದೇವೆ. ಅದಕ್ಕಾಗಿ ಡಾಕ್ಟರ್ ಆಗಲು ಯೂಕ್ರೇನ್ಗೆ ಹೋಗಬೇಕಾಯಿತು ಎಂದು ಶಿವಾನಿ ಬೇಸರ ತೋಡಿಕೊಂಡರು.
5 ದಿನ ಬೇಸ್ವೆುಂಟ್ನಲ್ಲಿ ಉಪವಾಸ: ‘ಐದು ದಿನಗಳ ಕಾಲ ನಾವು ಮೆಟ್ರೋ ಬೇಸ್ವೆುಂಟ್ನಲ್ಲಿ ಇದ್ದೆವು. ಊಟ, ತಿಂಡಿ, ನೀರು ಯಾವುದೇ ವ್ಯವಸ್ಥೆ ಇರಲಿಲ್ಲ. ಹೊರಗೆ ಬಂದರೆ ಎಲ್ಲಿ ಬಾಂಬ್ ಬೀಳುತ್ತದೋ ಎಂಬ ಆತಂಕ ಇತ್ತು’.
ರ್ಖಾವ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ 3ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ರಂಜಿತಾ ಕಲಕಟ್ಟಿ ಯೂಕ್ರೇನ್ನಲ್ಲಿ ಅನುಭವಿಸಿದ ಯಾತನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
‘ಮೂರ್ನಾಲ್ಕು ದಿನಗಳ ನಂತರ ಯೂಕ್ರೇನ್ ಸರ್ಕಾರ ನಮಗೆ ಊಟ, ತಿಂಡಿ ವ್ಯವಸ್ಥೆ ಮಾಡಿತ್ತು. ಆದರೆ, ನೀರಿನ ಸಮಸ್ಯೆ ಇತ್ತು. ನಮ್ಮ ವಿವಿ ಮೇಲೂ ದಾಳಿಯಾಗಿರುವುದು, ನಮ್ಮ ಸೀನಿಯರ್ ನವೀನ ಸಾವು ಬೇಸರ ತಂದಿತು. ನಮ್ಮ ಓದಿಗೆ ನವೀನ ಬಹಳ ಸಹಾಯ ಮಾಡುತ್ತಿದ್ದರು. ನಾವು ವಾಪಸ್ ಬಂದರೂ ಆತ ಬರಲಿಲ್ಲ. ಎಲ್ಲರೂ ವಾಪಸಾಗಿದ್ದರೆ ಸಂತೋಷವಾಗುತ್ತಿತ್ತು. ರ್ಖಾವ್ನಿಂದಲೇ ಭಾರತ ಸರ್ಕಾರ ಏರ್ಲಿಫ್ಟ್ ಮಾಡುವುದಾಗಿ ಹೇಳಿತ್ತು. ಆದರೆ, ಅಲ್ಲಿ ಬಾಂಬ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಹಾಗಾಗಿ, 17 ಗಂಟೆ ರೈಲಿನಲ್ಲಿ ಪ್ರಯಾಣ ಮಾಡಬೇಕಾಯಿತು. ಅಲ್ಲಿ 7 ಡಿಗ್ರಿ ಉಷ್ಣಾಂಷವಿತ್ತು. ರ್ಖಾವ್ನಿಂದ ಲಿವಿವ್, ಅಲ್ಲಿಂದ ಪೋಲೆಂಡ್ ಗಡಿಗೆ ಬಂದೆವು. ಅಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ವಿಮಾನ, ಊಟದ ವ್ಯವಸ್ಥೆ ಮಾಡಿದ್ದರು. ನಮ್ಮನ್ನು ಸುರಕ್ಷಿತವಾಗಿ ಕರೆತಂದ ಭಾರತ ಸರ್ಕಾರಕ್ಕೆ ರಂಜಿತಾ ಧನ್ಯವಾದ ತಿಳಿಸಿದ್ದಾರೆ.