ಜಿಲ್ಲೆ

ನಾಳೆಯಿಂದ ದ್ವೀತಿಯ ಪಿಯು ಪರೀಕ್ಷೆ

ಗ್ರಾಮಾಂತರ ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಿಂದ 11,431 ವಿದ್ಯಾರ್ಥಿಗಳ ನೋಂದಣಿ

ದೊಡ್ಡಬಳ್ಳಾಪುರ: ದ್ವೀತಿಯ ಪಿಯು ಪರೀೆ ಮಾ.1ರಂದು ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ಈ ಬಾರಿ 11,431 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಎನ್​.ಮೋಹನ್​ ಕುಮಾರ್​ ಹೇಳಿದರು.

ನಗರದ ಸರ್ಕಾರಿ ಪಿಯು ಕಾಲೇಜಿಗೆ ಗುರುವಾರ ಭೇಟಿ ನೀಡಿ ಪರೀಕ್ಷೆ ಕೇಂದ್ರಗಳನ್ನು ಪರಿಶೀಲಿಸಿ, ಮಾರ್ಚ್​ 1ರಿಂದ 20ವರೆಗೆ ನಡೆವ ದ್ವೀತಿಯ ಪಿಯು ವಾರ್ಷಿಕ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆ ಕುರಿತು ಮಾಹಿತಿ ನೀಡಿ, ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 3, ದೇವನಹಳ್ಳಿ ತಾಲೂಕಿನಲ್ಲಿ 3, ಹೊಸಕೋಟೆ ತಾಲೂಕಿನಲ್ಲಿ 5 ಮತ್ತು ನೆಲಮಂಗಲ ತಾಲೂಕಿನಲ್ಲಿ 6 ಒಟ್ಟು 17 ಪರೀಕ್ಷೆ ಕೇಂದ್ರಗಳಲ್ಲಿ ದ್ವೀತಿಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಕಲ ಸಿದ್ಧತೆ ನಡೆಸಲಾಗಿದೆ. ದ್ವೀತಿಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿರುವ 11,341 ವಿದ್ಯಾರ್ಥಿಗಳಲ್ಲಿ 10,757 ಹೊಸ ವಿದ್ಯಾರ್ಥಿಗಳು, 183 ಖಾಸಗಿ ವಿದ್ಯಾರ್ಥಿಗಳು, 401 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಬಾಲಕಿಯರ ಸಂಖ್ಯೆ ಹೆಚ್ಚು ಜಿಲ್ಲೆಯಲ್ಲಿ ದ್ವೀತಿಯ ಪಿಯು ಪರೀಕ್ಷೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಬಾಲಕಿಯರ ಸಂಖ್ಯೆ ಮುಂದಿದೆ. ಈ ಬಾರಿ ದ್ವೀತಿಯ ಪಿಯು ಪರೀಕ್ಷೆಯನ್ನು 6,247 ಬಾಲಕಿಯರು ಮತ್ತು 5,094 ಬಾಲಕರು ಬರೆಯಲಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯರ್ನಿಣಯ ಮಂಡಳಿ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದ್ವೀತಿಯ ಪಿಯು ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಪರೀಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ವೆಬ್​ ಕಾಸ್ಟಿಂಗ್​ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8 ಸರಕಾರಿ ಪಿಯು ಕಾಲೇಜು, 3 ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜು, 6 ಖಾಸಗಿ ಅನುದಾನ ರಹಿತ ಪಿಯು ಕಾಲೇಜಿನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿವೆ.

ನಿಷೇಧಾಜ್ಞೆ ಜಾರಿ ಪರೀಕ್ಷೆ ಕೇಂದ್ರಗಳಲ್ಲಿ ಅಕ್ರಮ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಜಾಗೃತ ದಳ ಜತೆಗೆ ಪರೀಕ್ಷೆ ಕೇಂದ್ರದ ಸುತ್ತಲೂ 200 ಮೀಟರ್​ ಸುತ್ತ ನಿಷೆೇಧಾೆ ಜಾರಿ ಮಾಡಿದ್ದು, ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ. ಜೆರಾಕ್ಸ್​ ಅಂಗಡಿ, ಕಂಪ್ಯೂಟರ್​ ಸೆಂಟರ್​ಗಳನ್ನು ಮುಚ್ಚಲು ಸೂಚಿಸಲಾಗಿದೆ.

ಉಚಿತ ಸಾರಿಗೆ ಸೌಲಭ್ಯ ಜಿಲ್ಲೆಯ ದ್ವೀತಿಯ ಪಿಯು ಪರೀಾ ಕೇಂದ್ರಗಳಲ್ಲಿ ಪರೀೆ ಬರೆವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆ ಕೇಂದ್ರಗಳು ದೊಡ್ಡಬಳ್ಳಾಪುರ: ಸರ್ಕಾರಿ ಪದವಿಪೂರ್ವ ಕಾಲೇಜು, ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜು, ಶ್ರೀ ದೇವರಾಜ ಅರಸು ಪಿಯು ಕಾಲೇಜು ದೇವನಹಳ್ಳಿ : ಸರ್ಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಗತಿ ಬಾಲಕಿಯರ ಪದವಿಪೂರ್ವ ಕಾಲೇಜು. ಹೊಸಕೋಟೆ & ಸರ್ಕಾರಿ ಪದವಿಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಮಹಾದೇವ ಪದವಿಪೂರ್ವ ಕಾಲೇಜು, ವಿದ್ಯಾವನ ಪದವಿಪೂರ್ವ ಕಾಲೇಜು, ನಂದಗುಡಿ ಸರ್ಕಾರಿ ಪಿಯು ಕಾಲೇಜು. ನೆಲಮಂಗಲ: ಸರ್ಕಾರಿ ಪಿಯು ಕಾಲೇಜು, ಬಸವೇಶ್ವರ ಪಿಯು ಕಾಲೇಜು, ಬಸವೇಶ್ವರ ಬಾಲಕಿಯರ ಪಿಯು ಕಾಲೇಜು, ಹೊಯ್ಸಳ ಪಿಯು ಕಾಲೇಜು, ದಿವ್ಯ ಜ್ಯೋತಿ ಪಿಯು ಕಾಲೇಜು, ತ್ಯಾಮಗ್ಲೊಂಡು ಸರ್ಕಾರಿ ಪಿಯು ಕಾಲೇಜುಗಲ್ಲಿ ಪರೀಕ್ಷೆನಡೆಯಲಿವೆ.