ಜಿಲ್ಲೆ

ನಾಳೆಯಿಂದ ಉಚಿತ ನೋಂದಣಿ ಕೇಂದ್ರ ಆರಂಭ

ಹಾಸನ: ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ವತಿಯಿಂದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳು ನೋಂದಾಯಿಸಿಕೊಳ್ಳಲು ಉಚಿತ ನೋಂದಣಿ ಕೇಂದ್ರವನ್ನು ಕುವೆಂಪುನಗರದಲ್ಲಿ ಆರಂಭಿಸಲಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾಮಾಜಿಕ ಜಾಲತಾಣ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಆರ್. ವಿನೋದ್ ಕುಮಾರ್ ತಿಳಿಸಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಾದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಅರ್ಹ ಫಲಾನು ಭವಿಗಳು ನಾಳೆಯಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದ್ದು, ಜನರ ಅನುಕೂಲಕ್ಕಾಗಿ ಕುವೆಂಪು ನಗರದ ನಂ. 425, 11ನೇ ಅಡ್ಡ ರಸ್ತೆಯಲ್ಲಿ ನೋಂದಣಿ ಕೇಂದ್ರ ವನ್ನು ನಾಳೆಯಿಂದ ಆರಂಭಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ನೋಂದಣಿ ಕೇಂದ್ರದ ಉದ್ಘಾಟನೆಯನ್ನು ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ.ಎಚ್. ಲಕ್ಷ್ಮಣ್, ಮುಖಂಡ ಬನವಾಸೆ ರಂಗಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದಿಂದ 5 ಗ್ಯಾರಂಟಿಗಳನ್ನು ನೀಡಲಾಗಿತ್ತು. ಅಧಿಕಾರಕ್ಕೆ ಬಂದ ನಂತರ ಆ ಎಲ್ಲಾ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈಡೇರಿಸಲಾಗಿದ್ದು, ಗ್ಯಾರಂಟಿ ಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಈ ಕೇಂದ್ರದಲ್ಲಿ ಉಚಿತವಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಎಂ.ಪ್ರಕಾಶ್, ಎಂ.ಆರ್. ರವಿ ರಾಮೇಗೌಡ, ಸಮೀರ್ ಪಾಷ, ತೀರ್ಥ, ಸದಾಶಿವ ಹಾಜರಿದ್ದರು.