ಗೋಣಿಕೊಪ್ಪ: ಗೋಣಿಕೊಪ್ಪ ದಸರಾ ಹಿನ್ನೆಲೆಯಲ್ಲಿ ಸೆ. 24 ಮತ್ತು ಸೆ. 25ರಂದು ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಸೌತ್‌ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಹರಿಶ್ಚಂದ್ರಪುರ ಮನೆಯಪಂಡ ಯಾರ್ಡ್‌ನಲ್ಲಿ 20ನೇ ವರ್ಷದ ಆಟೋಕ್ರಾಸ್ ರ‌್ಯಾಲಿ ಆಯೋಜಿಸಲಾಗಿದೆ ಎಂದು ಸೌತ್‌ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ. ಕೆ. ಬೋಪಣ್ಣ ತಿಳಿಸಿದರು.
ಗುರುವಾರ ಪ್ರೆಸ್ ಕ್ಲಬ್‌ನಲ್ಲಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸೆ.24 ರಂದು ದ್ವಿಚಕ್ರ, 25ರಂದು ನಾಲ್ಕುಚಕ್ರ ರ‌್ಯಾಲಿ ನಡೆಯಲಿದೆ. ಮಹಿಳೆಯರಿಗೆ ಲೇಡಿಸ್ ಕ್ಲಾಸ್ ವಿಭಾಗದಲ್ಲಿ ಕಾರು ಸ್ಪರ್ಧೆ ಇದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ರ‌್ಯಾಲಿಪಟುಗಳು ಕೂಡ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
200ಕ್ಕೂ ಹೆಚ್ಚು ವಾಹನ ಪಾಲ್ಗೊಳ್ಳುತ್ತಿವೆ. ದೂರದ ಊರುಗಳಿಂದ ಪಾಲ್ಗೊಳ್ಳುವ ಸ್ಪರ್ಧಿಗಳನ್ನು ಪ್ರೋತ್ಸಾಹಿಸಲು ಇಬ್ಬರು ಆಟಗಾರರಿಗೆ ಏರ್ ಟಿಕೆಟ್ ನೀಡಲಾಗುವುದು. ಒಂದು ದಿನ ದೇಶದಲ್ಲಿ ಸುತ್ತಾಡಲು ಅವರಿಗೆ ಅವಕಾಶ ದೊರೆಯಲಿದೆ. ನಾಲ್ಕುಚಕ್ರ ಚಾಂಪಿಯನ್‌ಗೆ 1 ಲಕ್ಷ ರೂ., ದ್ವಿಚಕ್ರ ಚಾಂಪಿಯನ್‌ಗೆ 25 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.
ಒಟ್ಟು 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ದ್ವಿಚಕ್ರದಲ್ಲಿ ಕೂರ್ಗ್ ನಾವೀಸ್, ಕೂರ್ಗ್ ಓಪನ್, ಕೂರ್ಗ್ ಬುಲೆಟ್ ಓಪನ್, ನಾವೀಸ್ ಕ್ಲಾಸ್ ಎನ್ -1, ಕಿಡ್ಸ್ ಕ್ಲಾಸ್ (14 ವಯೋಮಿತಿ), 4 ರೋಕ್ ಓಪನ್, ಕ್ಲಬ್ ಕ್ಲಾಸ್ ಓಪನ್, ನ್ಯೂ ಬಾಯ್ಸ ಓಪನ್, ಸ್ಕೂಟರ್ ಓಪನ್, ಮೊಪೆಡ್ ಓಪನ್, ಇಂಡಿಯನ್ ಓಪನ್, ಫಾರಿನ್ ಓಪನ್ ಮೋಟೋ -1, ಫಾರಿನ್ ಓಪನ್ ಮೋಟೋ -2, ನಾಲ್ಕುಚಕ್ರ ವಿಭಾಗದಲ್ಲಿ 800 ಸಿಸಿ, 1100 ಸಿಸಿ, ಕೂರ್ಗ್ ನಾವೀಸ್, ಕೂರ್ಗ್ ಓಪನ್, ಡೀಸೆಲ್ ಕ್ಲಾಸ್, ಜಿಪ್ಸಿ ಓಪನ್, ಎಸ್ಟೀಮ್ ಕ್ಲಾಸ್, 1400 ಸಿಸಿ, 1600 ಸಿಸಿ, ಇಂಡಿಯನ್ ಒಪನ್ ಕ್ಲಾಸ್, ಅನ್‌ರಿಸ್ಟ್ರಿಕ್ಟೆಡ್ ಓಪನ್, ರೇಸ್ ಫಾರ್ ರೋಲ್ ಕೇಜ್ ಕಾರ್ಸ್, ಟ್ಯೂನರ್ಸ್ ಕ್ಲಾಸ್ ಸ್ಪರ್ಧೆ ನಡೆಯಲಿದೆ. ರ‌್ಯಾಲಿ ಉತ್ತಮ ಛಾಯಾಚಿತ್ರಕ್ಕೆ ಬೆಸ್ಟ್ ಫೋಟೋಗ್ರಫಿ ಬಹುಮಾನ ಕೂಡ ನೀಡಲಾಗುವುದು ಎಂದು ತಿಳಿಸಿದರು.