ಯಾದಗಿರಿ: ತಾಲೂಕಿನ ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯರ ರಥೋತ್ಸವ 25ರಂದು ಸಂಜೆ.6.30ಕ್ಕೆ ನಡೆಯಲಿದ್ದು ಮಠದ ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ತದಲ್ಲಿ ಜಾತ್ರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿ, ಅಂತಿಮ ಹಂತದಲ್ಲಿವೆ ಎಂದು ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಶ್ರೀಮಠದ ಆವರಣದಲ್ಲಿ ನಿತ್ಯ ಸಂಜೆ 7 ಗಂಟೆಗೆ ವಿಶ್ವಾರಾಧ್ಯರ ಪುರಾಣ ಈಗಾಗಲೇ ಪ್ರಾರಂಭಗೊಂಡಿದೆ. ಶುಕ್ರವಾರ ಪುರಾಣ ಮಹಾಮಂಗಲಗೊಳ್ಳುವುದು. ಮಠದ ಸುಣ್ಣ ಬಣ್ಣ ಕಾರ್ಯ ಪೂರ್ಣಗೊಂಡಿದ್ದು, ಜಾತ್ರೆಗಾಗಿ ಬೃಹತ್ ಪೆಂಡಾಲ ಹಾಕುವ ಕಾರ್ಯ ಕೊನೆಯ ಹಂತದಲ್ಲಿದೆ. ದಾಸೋಹ ಕಾರ್ಯಕ್ಕಾಗಿ ವಿವಿಧ ಬಗೆಯ ದವಸ-ಧಾನ್ಯಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಮಠದ ಭಕ್ತರು ಜಾತ್ರೆಯ ಪೂರ್ವ ಸಿದ್ಧತೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಜಾತ್ರೆ ನಿಮಿತ್ತ ಭಕ್ತರ ದಂಡು ಈಗಾಗಲೇ ಅಬ್ಬೆತುಮಕೂರಿನತ್ತ ಮುಖ ಮಾಡಿದೆ. ದೂರದ ಊರುಗಳಿಂದ ಜನತೆ ಮಠದಕ್ಕೆ ಆಗಮಿಸಿ, ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭವ್ಯ ರಥೋತ್ಸವದ ನಂತರ ರಾತ್ರಿ 8 ಗಂಟೆಗೆ ಮಾನವ ಧರ್ಮ ಸಮಾವೇಶ ಜರುಗಲಿದ್ದು, ನಾಡಿನ ಹರ,ಗುರು, ಚರಮೂತರ್ಿಗಳು, ರಾಜಕೀಯ ಮುತ್ಸದ್ಧಿಗಳು, ಕವಿ, ಸಾಹಿತಿಗಳು ಭಾಗವಹಿಸುವರು. ತರುವಾಯ ಖ್ಯಾತ ಚಲನಚಿತ್ರ ನಟ-ನಟಿಯರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.