ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಸೆ.25ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೊಂಗನೂರು, ಇರಸವಾಡಿ, ಮಸಣಾಪುರ, ಚಾಟಿಪುರ, ಗಂಗವಾಡಿ, ಬೂದಂಬಳ್ಳಿ, ಬೂದಂಬಳ್ಳಿ ಮೋಳೆ, ಗೂಳಿಪುರ, ಹೊಮ್ಮ, ರೇಚಂಬಳ್ಳಿ, ಹೆಚ್. ಮೂಕಳ್ಳಿ, ಕುರುಬರಹುಂಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ನಿಗಮದ ಜತೆ ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.