ಕೊಳ್ಳೇಗಾಲ: ತಾಲೂಕಿನ 66/11 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಆ.24 ರಂದು ಬೆಳಗ್ಗೆ 10 ರಿಂದ 6 ಗಂಟೆ ಯವರೆಗೆ ತ್ರೈಮಾಸಿಕ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
66/11 ಕೆ.ವಿ ವಿ.ವಿ. ಕೇಂದ್ರ ಕೊಳ್ಳೇಗಾಲ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11ಕೆವಿ ಫೀಡರ್‌ಗಳಾದ ದಾಸನಪುರ ವಾಟರ್ ಸಪ್ಪೆ ಮುಳ್ಳೂರು, ಐಪಿ(ಕಟ್ಟವಾಡಿ), ಕುಣಗಳ್ಳಿ ಐಪಿ, ಉತ್ತಂಬಳ್ಳಿ ಎನ್.ಜೆ.ವೈ, ಹರಳೆ ಐಪಿ, ಮುಡಿಗುಂಡ, ಸುಗರ್ ಫ್ಯಾಕ್ಟರಿಗಳಲ್ಲಿ ವಿದ್ಯುತ್ ನಿಲುಗಡೆ ಮಾಡುವುದರಿಂದ, ಕೊಳ್ಳೇಗಾಲ ಪಟ್ಟಣದ ಭೀಮನಗರ, ದೇವಾಂಗಪೇಟೆ, ದೊಡ್ಡನಾಯಕರ ಬೀದಿ, ಬೆಂಡ್ರಳ್ಳಿ-ಬೂದಿತಿಟ್ಟು, ಮುಡಿಗುಂಡ, ಶಂಕನಪುರ, ಬಾಪುನಗರ, ಕೊಳ್ಳೇಗಾಲ ಮೋಳೆ, ದಾಸನಪುರ, ಹರಳೆ, ಹಳೇ ಆಣಗಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಉತ್ತಂಬಳ್ಳಿ, ತೇರಂಬಳ್ಳಿ, ಗೊಬ್ಬಳಿಪುರ, ಮುಳ್ಳೂರು, ಹಳೇ ಹಂಪಾಪುರ ಮತ್ತು ಹೊಸ ಹಂಪಾಪುರ ಗ್ರಾಮಗಳಿಗೆ ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಎಂದಿನಂತೆ ನಿಗಮದ ಜತೆ ಸಹಕರಿಸಬೇಕೆಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.