ಜಿಲ್ಲೆ

ನಾಳೆ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ

ಬೇಲೂರು: ಬೇಲೂರಿನಲ್ಲಿ ಪ್ರಥಮ ಬಾರಿಗೆ ಫೆ.25ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಆಯೋಜಕ ನಿಂಗರಾಜು ಹೇಳಿದರು.


ಜೂನಿಯರ್ ಕಾಲೇಜು ಮೈದಾನದಲ್ಲಿ ಹೊನಲು ಬೆಳಕಿನ ಟ್ರಿಂಕೋ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದ್ದು, ವಿವಿಧ ಜಿಲ್ಲೆಗಳಿಂದ 16 ತಂಡಗಳು ಭಾಗವಹಿಸುತ್ತಿವೆ. ಪಂದ್ಯಾವಳಿಯು ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಪ್ರಥಮ ಸ್ಥಾನ ಗೆದ್ದ ತಂಡಕ್ಕೆ 33,333 ರೂ.ನಗದು, ಪಾರಿತೋಷಕ, ದ್ವಿತೀಯ 16,666 ರೂ.ನಗದು, ಪಾರಿತೋಷಕ ನೀಡಲಾಗುವುದು. ಅಲ್ಲದೆ ಉತ್ತಮ ಗೋಲ್ ಕೀಪರ್,ಉತ್ತಮ ಡಿಫೆಂಡರ್, ಉತ್ತಮ ತಂಡಕ್ಕೆ ಬಹುಮಾನ ನೀಡಲಾಗುವುದ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಹಿರಿಯ ಕ್ರೀಡಾಪಟು ಕೋಟೆ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಆಟದ ಮೈದಾನ ಉಳಿಸಲು ಕ್ರೀಡಾ ಪ್ರೇಮಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ, ರಾಜಕೀಯ ಶಕ್ತಿಗಳು ಅಡ್ಡಿಪಡಿಸುತ್ತಿರುವುದು ಬೇಸರದ ವಿಷಯ. ಮೈದಾನದ ಸುತ್ತ ಕಾಂಪೌಂಡ್ ನಿರ್ಮಿಸಲು ಹಲವು ಮುಖಂಡರು, ದಾನಿಗಳು ಮುಂದೆ ಬಂದಿದ್ದರೂ ಕೆಲವರು ಅಡ್ಡಿಪಡಿಸಿ ಮೈದಾನದ ಉಳಿವಿಗೆ ಮಾರಕವಾಗುತ್ತಿದ್ದಾರೆ. ಮೈದಾನದ ಉಳಿವಿಗೆ ಬೇಲೂರು ಕ್ರಿಕೆಟ್ ಕ್ಲಬ್ ಜತೆ ಹಲವಾರು ಸಂಘ ಸಂಸ್ಥೆಗಳು, ಮುಖಂಡರು ಬೆನ್ನೆಲುಬಾಗಿ ನಿಂತಿದ್ದಾರೆ. ರಾಜಕೀಯ ಹಿತಾಸಕ್ತಿ ಕೊರತೆಯಿಂದ ಇಂದಿಗೂ ಮೈದಾನಕ್ಕೆ ಕಾಂಪೌಂಡ್ ನಿರ್ಮಿಸಲು ಸಾಧ್ಯವಾಗಿಲ್ಲ ಎಲ್ಲರೂ ಕೈಜೋಡಿಸಬೇಕು ಎಂದರು.


ಫುಟ್ಬಾಲ್ ಕ್ಲಬ್‌ನ ಸದಸ್ಯರಾದ ಕೇಬಲ್ ರಮೇಶ್, ಸುಬ್ರಮಣ್ಯ, ಇದ್ದರು.