ಶೃಂಗೇರಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಲ್ಲೊಳ್ಳಿ ಪ್ರದೀಪ್ ಮಾತನಾಡಿದರು. ಅರುಣ್, ಆಶ್ರಯ್, ಇಂದ್ರಜಿತ್ ಹೆಗ್ಡೆ ಇತರರಿದ್ದರು. 
ಜಿಲ್ಲೆ

ನಾಳೆ ಯುವ ಕಾಂಗ್ರೆಸ್ ಪದಗ್ರಹಣ

ಶೃಂಗೇರಿ: ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮ ನೆನಪಿಗಾಗಿ ಮೇ 5ರಂದು ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಯುವ ಕಾಂಗ್ರೆಸ್ ಅಧ್ಯಕ್ಷ ಕಲ್ಲೊಳ್ಳಿ ಪ್ರದೀಪ್ ಹೇಳಿದರು.

ಶುಕ್ರವಾರ ಯುವ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 1924 ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಸ್ವಾತಂತ್ರೃಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರ ಸವಿನೆನಪಿಗೆ ಬೆಳಗಾವಿ ಅಧಿವೇಶನದ ನಿರ್ಣಯದಂತೆ ಜೈ ಬಾಪು, ಜೈಭೀಮ್, ಜೈ ಸಂವಿಧಾನ್, ಜೈ ಭಾರತ್ ಕಾರ್ಯಕ್ರಮವನ್ನು ಪಟ್ಟಣದ ಆದಿಚುಂಚನಗಿರಿ ಸಮುದಾಯಭವನದಲ್ಲಿ ಮೇ 5ರ ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಮುಖಂಡರಾದ ಸುಧೀರ್‌ಕುಮಾರ್ ಮೂರೊಳ್ಳಿ, ಕಿಮ್ಮನೆ ರತ್ನಾಕರ್, ಡಾ. ಅಂಶುಮಂತ್, ಶ್ರೀಜಿತ್ ಗೌಡ, ನಟರಾಜ ಮಾರನಕೊಡಿಗೆ, ದುರ್ಗಾಚರಣ್ ಕುಂಚೂರ್ ಭಾಗವಹಿಸಲಿದ್ದಾರೆ. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತಕ ಲಕ್ಷ್ಮೀಶ್ ಗಬ್ಬಲಡ್ಕ ವಿಶೇಷ ಉಪನ್ಯಾಸ ನೀಡುವರು ಎಂದರು.

ಯುವ ಕಾಂಗ್ರೆಸ್‌ನ ಶುಭಕೃತ್ ಮಾತನಾಡಿ, ಪಹಲ್ಗಾಮ್‌ನಲ್ಲಿ ಮೃತರಾದವರಿಗೆ ಹಾಗೂ ಇತ್ತೀಚೆಗೆ ನಿಧನರಾದ ಮಾಜಿ ಮಂತ್ರಿ ಬೇಗಾನೆ ರಾಮಯ್ಯ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ ಎಂದರು.

ಯುವ ಕಾಂಗ್ರೆಸ್ ಮುಖಂಡರಾದ ಶಶಾಂಕ್ ಮಲ್ನಾಡ್, ಆಶ್ರಯ್, ಅರುಣ್, ಇಂದ್ರಜಿತ್ ಹೆಗ್ಡೆ, ಶಿರಾಂಕ್ ಇತರರಿದ್ದರು.