ಜಿಲ್ಲೆ

ನಾಳೆ ಮರಕುಂಬಿಯಲ್ಲಿ ವಿಚಾರ ಸಂಕಿರಣ

ಸೋಮಲಿಂಗ ತಳವಾರ

ಬೈಲಹೊಂಗಲ: ಸಮೀಪದ ಮರಕುಂಬಿ ಗ್ರಾಮದ ಅಡವಿಸಿದ್ದೇಶ್ವರ ಸಮುದಾಯ ಭವನದಲ್ಲಿ ಕೆಎಲ್​ಇ ಸಂಸ್ಥೆಯ ಕೆವಿಕೆ ಮತ್ತಿಕೊಪ್ಪ, ಸಿದ್ದಸಿರಿ ಸಾವಯವ ಕೃಷಿಕರ ಸಂ ಬೆಳಗಾವಿ ಹಾಗೂ ಚಾಮುಂಡೇಶ್ವರಿ ಬಸಪ್ಪನವರ ಆತ್ಮ ಸಂ ಮರಕುಂಬಿ ಸಂಯುಕ್ತ ಆಶ್ರಯದಲ್ಲಿ ಜು.10ರಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಿರುವ ಒಣ ಬೇಸಾಯದಲ್ಲಿ ಸಾವಯವ ಕೃಷಿ, ರೈತರ ನಡೆ ಸಾವಯವದ ಕಡೆ ವಿಚಾರ ಸಂಕಿರಣದಲ್ಲಿ ಸಾವಯವ ಕೃಷಿ ಸಂತ ಮಹಾರಾಷ್ಟ್ರದ ಕನ್ಹೇರಿಮಠದ ಅದಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಲಿದ್ದಾರೆ ಎಂದು ಕೆವಿಕೆ ಪ್ರಾಚಾಯೆರ್ ಶ್ರೀದೇವಿ ಅಂಗಡಿ ಹೇಳಿದರು.

ಸಮೀಪದ ಮರಕುಂಬಿ ಗ್ರಾಮದಲ್ಲಿ ಸೋಮವಾರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಸಾವಯವ ಉತ್ಪನ್ನಗಳು ಪ್ರದರ್ಶನ ಮತ್ತು ವ್ಯಾಪಾರ ನಡೆಯಲಿದೆ. ಕೆಎಲ್​ಇ ಸಂಸ್ಥೆಯ ಅಧ್ಯ ಶಾಸಕ ಮಹಾಂತೇಶ ಕೌಜಲಗಿ, ನಿರ್ದೇಶಕರಾದ ಬಿ.ಆರ್​.ಪಾಟೀಲ, ಡಾ.ವಿ.ಐ. ಪಾಟೀಲ, ಎಸ್​.ಸಿ.ಮೆಟಗುಡ್ಡ, ಡಾ.ಸಿ.ಎಸ್​.ಸಾಧುನವರ, ಪಿಕೆಪಿಎಸ್​ ಅಧ್ಯ ಕಾರ್ತಿಕ ಪಾಟೀಲ, ರವಿ ಕುರಬೆಟ್ಟ, ಸವದತ್ತಿ ಎಪಿಎಂಸಿ ಮಾಜಿ ಅಧ್ಯ ಎ್​.ಎಸ್​.ಸಿದ್ದನಗೌಡರ ಆಗಮಿಸಲಿದ್ದಾರೆ ಎಂದರು. ಪಿಕೆಪಿಎಸ್​ ಅಧ್ಯ ಕಾರ್ತಿಕ ಪಾಟೀಲ, ಎ್​.ಎಸ್​.ಸಿದ್ದನಗೌಡರ, ಕೆವಿಕೆ ವಿಜ್ಞಾನಿ ಎಸ್​.ಎಂ.ವಾರದ, ಆತ್ಮ ಸಂದ ಅಧ್ಯ ರವಿ ಕುರಬೆಟ್ಟ, ಸಾವಯವ ಕೃಷಿಕರಾದ ಆನಂದ ವಾಲಿ, ಶಿವಾನಂದ ಗುರಕನವರ, ಮಂಜು ಮುರ್ಕಿಬಾವಿ, ರಾಯಣಗೌಡ ಪಾಟೀಲ, ವಿಶ್ವನಾಥ ರೇವಣ್ಣವರ, ಮಲ್ಲಿಕಾರ್ಜುನ ಗುರಕನವರ ಇತರರಿದ್ದರು.