ಜಿಲ್ಲೆ

ನಾಳೆ ಅಂತರ್​ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ

ಬೆಳಗಾವಿ: ಕನ್ನಡ ನಂ&1 ದಿನಪತ್ರಿಕೆ ವಿಜಯವಾಣಿ ಹಾಗೂ ಕೆಎಲ್​ಇ ಸಂಸ್ಥೆಯ ಆರ್​ಎಲ್​ಎಸ್​ ಕಾಲೇಜು ಸಹಯೋಗದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಅಂತರ್​ ಕಾಲೇಜು ಪ್ರಬಂಧ ಸ್ಪರ್ಧೆ ಜರುಗಲಿದೆ.

ನಗರದ ಲಿಂಗರಾಜ ಕಾಲೇಜ್​ ರಸ್ತೆಯಲ್ಲಿರುವ ಕೆಎಲ್​ಇ ಸಂಸ್ಥೆಯ ಆರ್​ಎಲ್​ಎಸ್​ ಕಾಲೇಜು ಸಭಾಂಗಣದಲ್ಲಿ ಆ.6ರಂದು ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಜರುಗಲಿರುವ ಅಂತರ್​ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಭಾರತ ಸ್ವಾತಂತ್ರ ಶತಮಾನೋತ್ಸವ ಅಂದರೆ ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದೇನು? ಇದರಲ್ಲಿ ಯುವಜನರ ಪಾತ್ರ ಏನು? ಎಂಬ ವಿಷಯದ ಮೇಲೆ ಪ್ರಬಂಧ ಬರೆಯಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಥಳದಲ್ಲೇ ಕನ್ನಡದಲ್ಲಿ ಪ್ರಬಂಧ ಬರೆದು ಬಹುಮಾನ ಗೆಲ್ಲಬಹುದು.

ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ&5000 ರೂ., ದ್ವೀತಿಯ ಬಹುಮಾನ& 3000 ರೂ. ಹಾಗೂ ತೃತೀಯ ಬಹುಮಾನ 2000 ರೂ. ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂಚಿತವಾಗಿ ಇಲ್ಲವೇ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ಸ್ಪರ್ಧಾಳುಗಳು ಕಡ್ಡಾಯವಾಗಿ ತಮ್ಮ ಕಾಲೇಜಿನ ಐಡಿ ತರಬೇಕು. ಮೌಲ್ಯಮಾಪಕರ ರ್ನಿಣಯವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿ ಮಾಡಿಕೊಳ್ಳಲು ಮೊ. 8884432467, 8884432180, 9945912291 ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಪ್ರಬಂಧ ಬರೆಯುವಾಗ ಮೊಬೈಲ್​, ಟ್ಯಾಬ್​, ಸ್ಮಾರ್ಟ್​ ವಾಚ್​ ಹಾಗೂ ಇನ್ನೀತರ ಗ್ಯಾಜೆಟ್​ಗಳನ್ನು ಕಡ್ಡಾಯವಾಗಿ ಸ್ವಿಚ್​ ಆ್​ ಮಾಡಬೇಕು. ಲಿತಾಂಶವನ್ನು ಸ್ವಾತಂತ್ರ$್ಯ ಮಹೋತ್ಸವಕ್ಕಿಂತ ಎರಡು ದಿನ ಮೊದಲೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.