ಜಿಲ್ಲೆ

ನಾಲ್ವರು ಬೈಕ್ ಕಳ್ಳರ ಬಂಧನ

ಕಲಬುರಗಿ: ಮಹಾಗಾಂವ್ ಕ್ರಾಸ್ ಸೇರಿ ವಿವಿಧೆಡೆ ನಡೆದಿದ್ದ ಬೈಕ್ ಕಳ್ಳತನದ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಐದು ಮೋಟಾರ್ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಬಲಾದ ಐಕೆ ಗ್ರಾಮದ ಅಜಯ ಹೋಳ್ಕರ್(೨೩), ಕಮಲನಗರದ ಸರ್ವಂತ ಚವ್ಹಾಣ್ (೧೮), ಕಮಲನಗರದ ಪ್ರಶಾಂತ ಜಮಾದಾರ(೨೦), ಕಮಲನಗರದ ಉಮೇಶ ಆಡೆ (೨೪) ಬಂಧಿತರು. ಬಂಧಿತರಿAದ ೧.೨೫ ಲಕ್ಷ ರೂ. ಮೌಲ್ಯದ ಐದು ಮೋಟಾರ್ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಾಗಾಂವ್ ಠಾಣೆ ಪಿಎಸ್‌ಐ ಆಶಾ, ಸಿಬ್ಬಂದಿ ರಾಮಚಂದ್ರ, ಕಿಶನ್ ಜಾಧವ್, ಬಸವರಾಜ, ಸಿದ್ದಲಿಂಗ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಕಾರ್ಯಕ್ಕೆ ಎಸ್‌ಪಿ ಶ್ಲಾಘಿಸಿದ್ದಾರೆ.