ಜಿಲ್ಲೆ

ನಾಲ್ಕು ಶಾಲೆಗೆ ಟೆಲಿಸ್ಕೋಪ್ ವಿತರಣೆ

ಜಯತೀರ್ಥ ಪಾಟೀಲ

ಕಲಬುರಗಿ: ಸೌರಮಂಡಲ ಅಧ್ಯಯನಕ್ಕೆ ಮಕ್ಕಳಿಗೆ ನೆರವಾಗಲು ಜಿಪಂ ಅನುದಾನದಿಂದ ತಲಾ ೧ ಲಕ್ಷ ರೂ. ವೆಚ್ಚದ ನಾಲ್ಕು ಟೆಲಿಸ್ಕೋಪ್‌ಗಳನ್ನು ಅತಿ ಹೆಚ್ಚು ದಾಖಲಾತಿ ಹೊಂದಿದ ಶಾಲೆಗಳಿಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ವಿತರಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಂದೂರ (ಕೆ)ನ ಕುವೆಂಪು ಮಾದರಿ ಸರ್ಕಾರಿ ಪ್ರೌಢ ಶಾಲೆ, ಬಸವೇಶ್ವರ ನಗರದ ಕರ್ನಾಟಕ ಪಬ್ಲಿಕ್ ಶಾಲೆ, ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಆದರ್ಶ ವಿದ್ಯಾಲಯ ಹಾಗೂ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು.
ವಿಶೇಷ ತರಗತಿ, ಕಾರ್ಯಾಗಾರ ಮತ್ತು ಗ್ರಹಣ ದಿನದಂದು ಆಕಾಶಕಾಯ ನೋಡಬಹುದು. ಮಕ್ಕಳಲ್ಲಿ ಖಗೋಳ ವಿe್ಞÁನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲು ಸಹಕಾರಿಯಾಗಿದೆ. ತ್ರಿಪಾದ ಆಧಾರ ಸ್ತಂಭ ಹೊಂದಿದ್ದು, ದೂರದರ್ಶಕಗಳನ್ನು ಶಾಲೆ ಆವರಣದಲ್ಲಿ ನಿಲ್ಲಿಸಿ ಆ ಮೂಲಕ ಗ್ರಹ, ನP್ಷÀತ್ರಗಳ ಬಗ್ಗೆ ಅಧ್ಯಯನ ಮಾಡಬಹುದು ಎಂದರು. ಸಚಿವ ಶರಣಪ್ರಕಾಶ ಪಾಟೀಲ್, ಜಿಲ್ಲೆಯ ಜನಪ್ರತಿನಿಧಿಗಳು, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಇದ್ದರು.