ಜಿಲ್ಲೆ

ನಾಲ್ಕು ಮನೆಗಳಲ್ಲಿ ಸರಣಿಗಳ್ಳತನ

ಕಲಬುರಗಿ: ಪಂಡಿತ ದೀನದಯಾಳ ಉಪಾಧ್ಯಯ ನಗರದಲ್ಲಿ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ಮಾಡಿದ ಘಟನೆ ನಡೆದಿದೆ. ನಿವಾಸಿಗಳಾದ ಹಬೀದ್ ಅಲಿ, ನಾಗಮ್ಮ ಕಾಂಬಳೆ, ಜುಬೇದ ಬೇಗಂ, ಅನಿತಾ ಸಿಂಘೆ ಅವರ ಮನೆಯಿಂದ ಕಳ್ಳತನ ಮಾಡಲಾಗಿದೆ ಎಂದು ಮೊಹ್ಮದ್ ಹಬೀದ್ ಅಲಿ ದೂರು ನೀಡಿದ್ದಾರೆ.

ಹಬೀದ್ ಅಲಿ ಚಿತ್ತಾಪುರ ತಾಲೂಕಿನ ಮಳಗಿ ಗ್ರಾಮದ ಸಂಬAಧಿಕರ ಮನೆಗೆ ಕುಟುಂಬದವರೊAದಿಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಇನ್ವೆಟರ್ ಕಳ್ಳತನ ಮಾಡಲಾಗಿದೆ. ಪಕ್ಕದ ಮನೆಯ ನಾಗಮ್ಮ ಕಾಂಬಳೆ ಅವರ ಮನೆಯ ಬೀಗ ಮುರಿದು ಬಂಗಾರದ ತಾಳಿ, ಗುಂಡು, ಕಿವಿಯೋಲೆ ಕಳವು ಮಾಡಲಾಗಿದೆ. ಎದುರು ಮನೆಯ ಜುಬೇದಾ ಬೇಗಂ ಅವರ ಮನೆಯಿಂದ ಎಲï‌ಇಡಿ ಟಿವಿ, ಅನಿತಾ ಸಿಂಘೆ ಮನೆಯಿಂದ ತಾಳಿ ಬೊಟ್ಟು, ಎರಡು ಗುಂಡು ಕಳ್ಳತನವಾಗಿವೆ ಎಂಬ ದೂರಿನಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.