ಬಾಳೆಹೊನ್ನೂರು: ಪಟ್ಟಣದ ಒಂದು ವೈನ್ಸ್ ಶಾಪ್ ಸೇರಿದಂತೆ ಒಟ್ಟು ನಾಲ್ಕು ಅಂಗಡಿಗಳಲ್ಲಿ ಗುರುವಾರ ಮುಂಜಾನೆ ಸರಣಿ ಕಳವು ಮಾಡಲಾಗಿದೆ.
ಪಟ್ಟಣದ ಮುಖ್ಯರಸ್ತೆಯ ಪವನ್ ಪ್ರಾವಿಷನ್ ಸ್ಟೋರ್, ಎನ್.ಆರ್.ಪುರ ರಸ್ತೆಯ ಕಲ್ಮಕ್ಕಿ ವೈನ್ಸ್, ಪ್ರಭು ಪ್ರಾವಿಷನ್ ಸ್ಟೋರ್ ಹಾಗೂ ಬಾಳೆಹೊನ್ನೂರು ಕಾಫಿ ಲಿಂಕ್ಸ್ ಎಂಬ ಅಂಗಡಿಗಳಲ್ಲಿ ಗುರುವಾರ ಮುಂಜಾನೆ ಕಳವು ಮಾಡಲಾಗಿದೆ. ನಾಲ್ಕು ಅಂಗಡಿಗಳಲ್ಲಿ ಬೀಗ ಒಡೆಯದೆ ಬಾಗಿಲನ್ನು ಆಯುಧದಿಂದ ಮೀಟಿ ನುಗ್ಗಿರುವ ಕಳ್ಳರು ನಗದು, ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಇದರೊಂದಿಗೆ ಅಂಗಡಿಗಳಲ್ಲಿದ್ದ ಸಿಸಿಟಿವಿಯ ಡಿವಿಆರ್‌ಗಳನ್ನೂ ಒಯ್ದಿದ್ದಾರೆ.
ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ಸಿಪಿಐ ಗುರು ಕಾಮತ್, ಪಿಎಸ್‌ಐ ರವೀಶ್ ಸ್ಥಳ ಪರಿಶೀಲಿಸಿದ್ದಾರೆ.