ಕೊಳ್ಳೇಗಾಲ: ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಚಿತ್ರನಟ ಉಪೇಂದ್ರ ಅವರನ್ನು ಬಂಧಿಸುವಂತೆ ಆಗ್ರಹಿಸಿ ಆದಿದ್ರಾವಿಡ ಹೋರಾಟ ಸಮಿತಿ ತಾಲೂಕು ಕಚೇರಿ ಮುಂಭಾಗ ಕೈಗೊಂಡಿರುವ ಧರಣಿ ಗುರುವಾರವೂ ಮುಂದುವರಿಯಿತು.
ಸರ್ಕಾರ ಉಪೇಂದ್ರ ಅವರನ್ನು ಬಂಧಿಸಬೇಕು. ಇಲ್ಲವೇ ಪೊರಕೆ ಚಳವಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಸಮಿತಿ ಸಂಚಾಲಕ ಅಣಗಳ್ಳಿ ಬಸವರಾಜು, ಸಂಚಾಲಕರಾದ ಜೆ.ನಿಂಗರಾಜು, ಸುರೇಶ್, ದಿಲೀಪ್, ಸಿದ್ದಪ್ಪಾಜಿ, ಕೆಂಪರಾಜು, ಪುಟ್ಟಮ್ಮ, ರಾಣಿ ಮತ್ತಿತರಿದ್ದರು.