ಜಿಲ್ಲೆ

ನಾಲೆಯ ಹರಿಯುವ ನೀರಿನಲ್ಲಿ ಏಕದಂತ

ಕುರುಗೋಡು: ತಾಲೂಕಿನ ವಿವಿಧೆಡೆ ಭಾವೈಕ್ಯ ಸಾರುವ ಹಾಗೂ ಜಾಗೃತಿ ಮೂಡಿಸುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಗಣೇಶ ಮೂರ್ತಿಯೊಂದಿಗೆ ಲೈನ್‌ಮೆನ್ ಮಾದರಿಯ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿದ್ಯುತ್ ಅವಘಡ ತಡೆ ಕುರಿತು ಪೋಸ್ಟರ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ದೊಡ್ಡಬಸವೇಶ್ವರ ಆಲಯದ ಬಳಿಯ ರೈತ ಸಮುದಾಯ ಭವನದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಗುರುಗಳ ನಡುವೆ ಶ್ರೀರಾಮನ ಅವತಾರದ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯ ಸಂದೇಶ ಸಾರಲಾಗುತ್ತಿದೆ.

ಹಳೇ ಎಸ್‌ಬಿಎಂ ರಸ್ತೆಯಲ್ಲಿ ಬೋಧಿ ವೃಕ್ಷದ ಕಳಗೆ ಧ್ಯಾನಿಸುವ ಗೌತಮ ಬುದ್ಧ ಮಾದರಿಯ ಗಣೇಶ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಮಕ್ಕಳೊಂದಿಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮುಷ್ಟಗಟ್ಟೆ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗದಿಂದ ತುಂಗಭದ್ರಾ ಎಡದಂಡೆ ಕಾಲುವೆಯ ಹರಿಯುವ ನೀರಿನಲ್ಲಿ ಟ್ರಾೃಕ್ಟರ್ ಟೂಬ್‌ಗೆ ಹಗ್ಗ ಕಟ್ಟಿ ಅದರ ಮೇಲೆ ಹಲಗೆ ಜೋಡಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.